Ad

ಜುಲೈನಲ್ಲಿ ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈಗ 2024-25ರ ಹಣಕಾಸು ವರ್ಷಕ್ಕೆ ಹೊಸ ಸರ್ಕಾರದಿಂದ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ಅ ವರೇ ಹಣಕಾಸು ಸಚಿವರಾಗಿ ಮುಂದುವರಿದಿದ್ದು, ಜುಲೈನಲ್ಲಿ ಬಜೆಟ್ ಮಂಡಿಸಲಿರುವುದು ಖಚಿತವಾಗಿದ್ದರೂ ಯಾವ ದಿನ ಎಂದು ಇನ್ನೂ ನಿರ್ದಿಷ್ಟವಾಗಿಲ್ಲ.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈಗ 2024-25ರ ಹಣಕಾಸು ವರ್ಷಕ್ಕೆ ಹೊಸ ಸರ್ಕಾರದಿಂದ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ಅ ವರೇ ಹಣಕಾಸು ಸಚಿವರಾಗಿ ಮುಂದುವರಿದಿದ್ದು, ಜುಲೈನಲ್ಲಿ ಬಜೆಟ್ ಮಂಡಿಸಲಿರುವುದು ಖಚಿತವಾಗಿದ್ದರೂ ಯಾವ ದಿನ ಎಂದು ಇನ್ನೂ ನಿರ್ದಿಷ್ಟವಾಗಿಲ್ಲ.

Ad
300x250 2

ಜುಲೈ ಮೂರನೇ ವಾರದಲ್ಲಿ ಸಂಸತ್​ನಲ್ಲಿ ಬಜೆಟ್ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಜುಲೈ 15ರಿಂದ 21ರ ವಾರದಲ್ಲಿ ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆಗಬಹುದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆ ಆದ ಬಳಿಕ ಜುಲೈ ಮೊದಲ ಅಥವಾ ಎರಡನೇ ವಾರದೊಳಗೆ ಬಜೆಟ್ ಇರುತ್ತದೆ.

ಈ ಬಾರಿ ಸಾರ್ವತ್ರಿಕ ಚುನಾವಣೆ ನಡೆದದ್ದು 18ನೇ ಲೋಕಸಭೆಗೆ. ಜೂನ್ 24ಕ್ಕೆ ಹೊಸ ಲೋಕಸಭೆಯ ಮೊದಲ ಸೆಷನ್ ಆರಂಭವಾಗಲಿದೆ. ನೂತನ ಲೋಕಸಭಾ ಸದಸ್ಯರೆಲ್ಲರೂ ಈ ವೇಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯುತ್ತದೆ. ಮೂರು ದಿನ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಜೂನ್ 27ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆ ಮತ್ತು ಲೋಕಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 3ರವರೆಗೂ ಈ ಅಧಿವೇಶನ ಮುಂದುವರಿಯಲಿದೆ.

 

Ad
Ad
Nk Channel Final 21 09 2023
Ad