Bengaluru 22°C
Ad

ಮೊದಲ ಬಾರಿಗೆ 84 ಸಾವಿರ ಗಡಿದಾಟಿ ಇತಿಹಾಸ ಬರೆದ ಸೆನ್ಸೆಕ್ಸ್

Stock

ಮುಂಬೈ: ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು ಇಂದು ಷೇರುಮಾರುಕಟ್ಟೆ ಆರಂಭದಲ್ಲೇ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.

ಹೌದು.. ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.

ಅಂತೆಯೇ ನಿಫ್ಟಿಕೂಡ ಆರಂಭಿಕ ವಹಿವಾಟಿನಲ್ಲಿ 261.10 ಅಂಶಗಳ ಏರಿಕೆಕಂಡು 25,676.90 ಅಂಕಗಳಿಗೆ ಏರಿಕೆಯಾಗಿದೆ. ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧಾರದ ನಂತರ ಜಾಗತಿಕ ಮಾರುಕಟ್ಟೆಯು ಏರುಗತಿಯಲ್ಲಿ ಸಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಅಂದರೆ ಶುಕ್ರವಾರ ನಿಫ್ಟಿ, ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಭಾರತೀಯ ಷೇರುಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ದೇಶೀಯ ಹೂಡಿಕೆದಾರರ ಬೆಂಬಲ ಮುಂದುವರಿದಿದೆ.

Ad
Ad
Nk Channel Final 21 09 2023