ಬೆಂಗಳೂರು: ದೇಶದಲ್ಲಿ ಚಿನ್ನಕ್ಕೆ ಬಹಳ ಮಹತ್ವ ಇದೆ. ಬೆಲೆ ಎಷ್ಟೇ ಏರಿದರೂ ಜನರು ಖರೀದಿ ಮಾಡೋದನ್ನ ಬಿಡಲ್ಲ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿದೆ. ಜನವರಿ 28 ರಂದು, ಚಿನ್ನದಲ್ಲಿ ಸ್ವಲ್ಪ ಕುಸಿತ ಕಂಡಿದೆ. ಇಂದು ಬೆಳಗ್ಗೆ ಹತ್ತು ರೂಪಾಯಿ ತುಸು ಕಡಿಮೆಯಾಗಿದ್ದು, ಸಂಜೆ ವೇಳೆಗೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
ದೇಶೀಯವಾಗಿ 10 ಗ್ರಾಂ 22 ಕ್ಯಾರೆಟ್ನ ಚಿನ್ನದ ಬೆಲೆ ರೂ.75,390 ಆಗಿದ್ದರೆ, 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ.82,240 ನಲ್ಲಿ ಮುಂದುವರಿದಿದೆ. ಬೆಳ್ಳಿ ಕೆಜಿಗೆ 100 ರೂಪಾಯಿ ಕಡಿಮೆ ಆಗಿದೆ. ಪ್ರಸ್ತುತ ಪ್ರತಿ ಕೆಜಿ ಬೆಳ್ಳಿ ಬೆಲೆ 96,400 ರೂಪಾಯಿ ಇದೆ.