ಬೆಂಗಳೂರು: ಕಳೆದ ಹತ್ತು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಗಿಂತ ಹೆಚ್ಚಳ ಆಗಿರುವುದೇ ಹೆಚ್ಚು. ಚಿನ್ನದ ಬೆಲೆ ಈ ಅವಧಿಯಲ್ಲಿ ಗ್ರಾಮ್ಗೆ 200 ರೂ ಸಮೀಪದಷ್ಟು ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ 85 ರೂ ಇದ್ದದ್ದು 92 ರೂಗೆ ಏರಿದೆ. ಇವೆರಡು ಲೋಹಗಳಿಗೆ ಬೆಲೆ ಏರಿಕೆ ಆಗುತ್ತಿರುವುದು ನಿರೀಕ್ಷಿತವೇ ಆಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ ಮಾಡುವ ಸುಳಿವು ದಟ್ಟವಾಗಿರುವುದರಿಂದ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 68,650 ರುಪಾಯಿ ಇದೆ.
24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 68,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,500 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,650 ರೂ ಇದೆ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,890 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,650 ರೂ, 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,890 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ ಇದೆ.