ದಕ್ಷಿಣ ಕೊರಿಯಾ: 10 ಲಕ್ಷಕ್ಕೂ ಹೆಚ್ಚಿನ ಉತ್ಪಾದನಗಳನ್ನು ಹಿಂತಿರುಗಿಸುವಂತೆ ಗ್ರಾಹಕರನ್ನು ಸ್ಯಾಮ್ಸಂಗ್ ಕಂಪನಿ ಕೇಳಿಕೊಂಡಿದೆ. ಬೆಂಕಿಯ ಅಪಾಯವಿರುವ ಕಾರಣ ಈ ನಿರ್ಣಯವನ್ನು ತೆಗೆದುಕೊಂಡಿದೆ.
ಸ್ಯಾಮ್ಸಂಗ್ 2013ರಿಂದ ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರಾಟವಾದ 1.1 ಮಿಲಿಯನ್ ಎಲೆಕ್ಟ್ರಿಕ್ ಸ್ಟೌವ್ಗಳನ್ನು ಹಿಂಪಡೆಯುತ್ತಿದೆ. ಈಗಾಗಲೇ ಈ ಸ್ಟೌವ್ನಿಂದ ಬೆಂಕಿ ತಗುಲಿ 250 ಆಸ್ತಿ ಹಾನಿ ಪ್ರಕರಣಗಳು, ಸಾಕು ಪ್ರಾಣಿಗಳು ಮತ್ತು 40 ಜನರು ಗಾಯಗೊಂಡ ಸಂಗತಿ ವರದಿಯಾಗಿದೆ.
ದಕ್ಷಿಣ ಕೊರಿಯಾದ ಈ ಜನಪ್ರಿಯ ಕಂಪನಿ ಹನ್ನೆರಡು ಮಾದರಿಯಲ್ಲಿ ಸ್ಟೌವ್ ಪರಿಚಯಿಸಿದೆ. ಗ್ರಾಹಕರಿಗಾಗಿ ಉಚಿತ ಕವರ್ ಮತ್ತು ಲಾಕ್ ನೀಡುತ್ತಿದೆ. ಇದು ಸ್ಟೌವ್ ಅನ್ನು ಆಫ್ ಮೂಡ್ನಲ್ಲಿರಿಸಲು ಸಹಾಯ ಮಾಡುತ್ತದೆ. ಸ್ಯಾಮ್ಸಂಗ್ ಸೌವ್ ಅನ್ನು ಚಿಲ್ಲರೆ ವ್ಯಾಪಾರಿಗಳ ಮೂಲಕ ಬೆಸ್ಟ್ ವೈನಿಂದ ಕಾಸ್ಟ್ಕೋಗೆ ಮಾರಾಟ ಮಾಡಿದೆ. ಈ ಕುರಿತಾಗಿ ನೋಟಿಸ್ ಕೂಡ ನೀಡಿದೆ.
Ad