Bengaluru 29°C
Ad

ಹಣದುಬ್ಬರ: ಯೂರೋಪಿಯನ್ ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ

ಯೂರೋಪ್​ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ ನೀವು ಪ್ರವಾಸ ಹೋಗುವುದಾದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಯೂರೋಪಿಯನ್ ಕಮಿಷನ್ ಶೆಂಗನ್ ವೀಸಾ ಶುಲ್ಕವನ್ನು ಶೇ. 12ರಷ್ಟು ಹೆಚ್ಚಿಸಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ. ವಿಶ್ವಾದ್ಯಂತ ಬರುವ ಪ್ರವಾಸಿಗರಿಗೆ ಇದು ಅನ್ವಯ ಆಗುತ್ತದೆ.

ನವದೆಹಲಿ: ಯೂರೋಪ್​ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ ನೀವು ಪ್ರವಾಸ ಹೋಗುವುದಾದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಯೂರೋಪಿಯನ್ ಕಮಿಷನ್ ಶೆಂಗನ್ ವೀಸಾ ಶುಲ್ಕವನ್ನು ಶೇ. 12ರಷ್ಟು ಹೆಚ್ಚಿಸಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ. ವಿಶ್ವಾದ್ಯಂತ ಬರುವ ಪ್ರವಾಸಿಗರಿಗೆ ಇದು ಅನ್ವಯ ಆಗುತ್ತದೆ.

ಆರರಿಂದ ಹನ್ನೆರಡು ವರ್ಷದ ವಯೋಮಾನದ ಮಕ್ಕಳಿಗೆ ಶೆಂಗನ್ ವೀಸಾ ಶುಲ್ಕ 45 ಯೂರೋಗೆ ಹೆಚ್ಚಿಸಲಾಗಿದೆ. 12 ವರ್ಷ ಮೇಲ್ಪಟ್ಟವರಿಗೆ ವೀಸಾ ಶುಲ್ಕ 90 ಯೂರೋಗೆ ಏರಿಸಲಾಗಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶುಲ್ಕ ಇರುವುದಿಲ್ಲ. ಈ ವಿಷಯವನ್ನು ಸ್ಲೊವೇನಿಯಾ ಸರ್ಕಾರ ಪ್ರಕಟಿಸಿದೆ. ಇಲ್ಲಿ ಒಂದು ಯೂರೋ ಕರೆನ್ಸಿಗೆ 90 ರೂ ಆಸುಪಾಸು ಬೆಲೆ ಇದೆ.

ಫ್ರಾನ್ಸ್, ಇಟಲಿ, ನೆದರ್​ಲ್ಯಾಂಡ್ಸ್, ಪೋಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಬಲ್ಗೇರಿಯಾ, ಸ್ವಿಟ್ಜರ್​ಲ್ಯಾಂಡ್, ಸ್ವೀಡನ್, ಸ್ಲೊವೇನಿಯಾ, ಪೋರ್ಚುಗಲ್, ಆಸ್ಟ್ರಿಯಾ ಮೊದಲಾದ ದೇಶಗಳೂ ಇದರಲ್ಲಿ. ಬ್ರಿಟನ್ ಈ ಯೂರೋಪಿಯನ್ ಒಕ್ಕೂಟದಲ್ಲಾಗಲೀ, ಶೆಂಗನ್ ಪ್ರದೇಶದ ವ್ಯಾಪ್ತಿಯಲ್ಲಾಗಲೀ ಸೇರಿಲ್ಲ.

ಈ ಶೆಂಗನ್ ವ್ಯಾಪ್ತಿಯಲ್ಲಿರುವ ಯೂರೋಪಿಯನ್ ದೇಶಗಳಿಗೆ ಸಾಮಾನ್ಯವಾಗಿರುವ ವೀಸಾ ಇತ್ಯಾದಿ ವ್ಯವಸ್ಥೆ ಇದೆ. ಅಲ್ಪ ಅವಧಿಯ ಪ್ರಯಾಣಕ್ಕೆ ಇಲ್ಲಿ ಟೈಪ್ ಸಿ ವೀಸಾ ನೀಡಲಾಗುತ್ತದೆ. ಇದುವೇ ಶೆಂಗನ್ ವೀಸಾ. ಈ ದೇಶಗಳಿಗೆ ಪ್ರವಾಸ ಹೋಗುವವರು ಶೆಂಗನ್ ವೀಸಾ ಪಡೆದರೆ ಸಾಕು. ಆ ವ್ಯಾಪ್ತಿಯ ಯಾವ ದೇಶಕ್ಕೆ ಬೇಕಾದರೂ ಮುಕ್ತವಾಗಿ ಸಂಚರಿಸಬಹುದಾಗಿದೆ.

ಹಣದುಬ್ಬರ ಏರುತ್ತಿರುವುದು, ಸರ್ಕಾರಿ ನೌಕರರ ಸಂಬಳ ಹೆಚ್ಚುತ್ತಿರುವುದು ಶೆಂಗನ್ ವೀಸಾ ಶುಲ್ಕ ಏರಿಸಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಶೆಂಗನ್ ವೀಸಾ ನಿಯಮಗಳನ್ನು ಪರಿಷ್ಕರಿಸಲಾಗುತ್ತದೆ.

Ad
Ad
Nk Channel Final 21 09 2023
Ad