Bengaluru 22°C
Ad

59,999 ರೂಪಾಯಿಯ ಸ್ಮಾರ್ಟ್​ಫೋನ್​ ಎಷ್ಟು ಕಡಿಮೆಗೆ ಸಿಗುತ್ತಿದೆ ಗೊತ್ತಾ?

ಗೂಗಲ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪಿಕ್ಸೆಲ್ 9 ಸರಣಿಯನ್ನು ಸಿದ್ಧಪಡಿಸಿದ್ದು, ಆಗಸ್ಟ್ 13 ರಂದು ಬಿಡುಗಡೆಗೆ ಸಿದ್ಧವಾಗಿದೆ. ಅದರ ಬಿಡುಗಡೆಗೆ ಮುಂಚಿತವಾಗಿ ಗೂಗಲ್​ Pixel 8 Pro, Pixel 8, Pixel 7a ಮತ್ತು Pixel 7 ನಂತಹ ಶ್ರೇಣಿಯ ಹಳೆಯ ಮಾದರಿಗಳು ರಿಯಾಯಿತಿ ಬೆಲೆಗೆ ಮಾರಾಟ ಮಾಡುತ್ತಿದೆ.

ಅಂದಹಾಗೆಯೇ ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ಗೂಗಲ್​ ಪಿಕ್ಸೆಲ್​ ಹಳೆಯ ಮಾದರಿಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. Pixel 8 Pro, Pixel 8, Pixel 7a ಮತ್ತು Pixel 7 ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಒಂದಕ್ಕಿಂತ ಒಂದು ಬೆಲೆ ಕಡಿತಗೊಳಿಸಿ ಮಾರಾಟ ಮಾಡಲಾಗುತ್ತಿದೆ.

ಫ್ಲಿಪ್​ಕಾರ್ಟ್​ನಲ್ಲಿ ಗೂಗಲ್​ ಪಿಕ್ಸೆಲ್​ 7 ಭಾರೀ ರಿಯಾಯಿತಿಯಲ್ಲಿ ಸಿಗುತ್ತಿದೆ. ಇದನ್ನು ಖರೀದಿಸುವವರು ಸುಮಾರು 27 ಸಾವಿರದಷ್ಟು ಉಳಿಸಬಹುದಾಗಿದೆ. ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್​ಫೋನನ್ನು 2023 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು.

59,999 ರೂಪಾಯಿಗೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 32,999 ಗೆ ಸಿಗುತ್ತಿದೆ. ಇದರ ಜೊತೆಗೆ, ಖರೀದಿದಾರರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 2,000 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ. ಗೂಗಲ್​ ಪಿಕ್ಸೆಲ್​ 7a ಸ್ಮಾರ್ಟ್‌ಫೋನ್​ಗಿಂತ 5 ಸಾವಿರ ರೂಪಾಯಿ ಕಡಿಮೆಗೆ ಗೂಗಲ್​ ಪಿಕ್ಸೆಲ್​ 7 ಸಿಗುತ್ತಿದೆ. ಪ್ರಸ್ತುತ ಫ್ಲಿಪ್​ಕಾರ್ಟ್​ನಲ್ಲಿ ಪಿಕ್ಸೆಲ್​ 7a ರೂಪಾಯಿ 35,999ಗೆ ಖರೀದಿಗೆ ಸಿಗುತ್ತಿದೆ.

Ad
Ad
Nk Channel Final 21 09 2023