Bengaluru 24°C
Ad

ದಿಢೀರ್​ ಗಗನಕ್ಕೇರಿದ ಅಡುಗೆ ಎಣ್ಣೆ ದರ : ಗ್ರಾಹಕರಿಂದ ಆಕ್ರೋಶ

ಅಡುಗೆ ಎಣ್ಣೆ ದರ ಲೀಟರ್​ಗೆ 20 ರಿಂದ 25 ರೂಪಾಯಿಗೆ ದಿಢೀರ್​ ಏರಿಕೆ ಕಂಡಿದೆ. ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ.

ಬೆಂಗಳೂರು: ಅಡುಗೆ ಎಣ್ಣೆ ದರ ಲೀಟರ್​ಗೆ 20 ರಿಂದ 25 ರೂಪಾಯಿಗೆ ದಿಢೀರ್​ ಏರಿಕೆ ಕಂಡಿದೆ. ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ, ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದ್ದು, ಹೀಗಾಗಿ ಎಣ್ಣೆ ದರ ಗಗನಕ್ಕೇರಿದೆ.

ಅಡುಗೆ ಎಣ್ಣೆ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಸಿಡಿಮಿಡಿಗೊಂಡಿದ್ದಾರೆ. ಈ ರೀತಿಯಾದರೆ ಜನ ಸಾಮಾನ್ಯರು ಬದುಕೊದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಬಡವರು ಬದುಕುವುದು ಕಷ್ಟ. ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 20 ರಿಂದ 25 ರೂ. ಹೆಚ್ಚಳ ಆಗಿದೆ. ತೆರಿಗೆ ದರ ಹೆಚ್ಚಳದಿಂದಾಗಿ ಬೆಲೆ‌ ಹೆಚ್ಚಳ ಆಗಿದೆ. ಹಳೆ ಮತ್ತು ಹೊಸ ಎಣ್ಣೆ ದರ ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ), ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ),

ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ), ರುಚಿ ಗೋಲ್ಡ್: 96 (ಹಳೆಯ ದರ), 112 ರೂ (ಈಗಿನ ದರ), ಜೆಮಿನಿ ಸನ್​ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ), ಫಾರ್ಚುನ್​: 111 (ಹಳೆಯ ದರ), 126 ರೂ (ಈಗಿನ ದರ), ಧಾರಾ: 116 (ಹಳೆಯ ದರ), 130 ರೂ (ಈಗಿನ ದರ).

Ad
Ad
Nk Channel Final 21 09 2023