ಪ್ರಿಪೇಯ್ಡ್ ಬಳಕೆದಾರರು ದೈನಂದಿನ ಬಳಕೆಗಾಗಿ ಡೇಟಾ, ಅನಿಯಮಿತ ಕರೆ ಇರುವ ಪ್ಲಾನ್ಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಬೆನಿಫಿಟ್ ಒದಗಿಸುವ ಪ್ಲಾನ್ಗಳ ಮೊರೆ ಹೋಗುತ್ತಾರೆ.
ಸದ್ಯ ದಿನಕ್ಕೆ 7 ರೂಪಾಯಿಗಿಂತ ಕಡಿಮೆ ಬೆಲೆಯ 75 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ಗಳ ಮೊರೆ ಹೋಗುತ್ತಿದ್ದಾರೆ. ಅದರಂತೆ ಇಲ್ಲೊಂದು ಬಿಎಸ್ಎನ್ಎಲ್ ಪ್ಲಾನ್ ಕೂಡ ಗ್ರಾಹಕರ ಮನಗೆದ್ದಿದ್ದು ಟ್ರೆಂಡಿಂಗ್ನಲ್ಲಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 499 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಜನರ ಮನಗೆದ್ದಿದೆ. ಈ ಪ್ಲಾನ್ 75 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಆನಂದಿಸಬಹುದಾಗಿದೆ. ದಿನಕ್ಕೆ 100 ಉಚಿತ ಎಸ್ಎಮ್ಎಸ್ ನೀಡುತ್ತಿದೆ. 499 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ 2ಜಿಬಿ ಡೇಟಾ ಒದಗಿಸುತ್ತದೆ. ಮಾತ್ರವಲ್ಲದೆ ಈ ರೀಚಾರ್ಜ್ ಯೋಜನೆಯೊಂದಿಗೆ ಬಳಕೆದಾರರು 3ಜಿಬಿ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.
Ad