Ad

ಬಿಎಂಡಬ್ಲ್ಯು R 1300 GS ಬೈಕ್ ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತಾ?

ದ್ವಿಚಕ್ರ ವಾಹನ ತಯಾರಕ ಕಂಪನಿ ಬಿಎಂಡಬ್ಲ್ಯು ಮೋಟೊರಾಡ್ R 1300 ಜಿಎಸ್‌ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ನವದೆಹಲಿ: ದ್ವಿಚಕ್ರ ವಾಹನ ತಯಾರಕ ಕಂಪನಿ ಬಿಎಂಡಬ್ಲ್ಯು ಮೋಟೊರಾಡ್ R 1300 ಜಿಎಸ್‌ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

Ad
300x250 2

ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ಲೈಟ್ ವೈಟ್, ಟ್ರಿಪಲ್ ಬ್ಲ್ಯಾಕ್‌, ಜಿಎಸ್ ಟ್ರೋಫಿ ಮತ್ತು ಚಾಯ್ಸ್ 719 ಟ್ರಮುಂಟನಾ ಎಂಬ ನಾಲ್ಕು ಮಾದರಿಗಳಲ್ಲಿ ಲಭ್ಯ. ಈ R 1300 GS ಬೈಕ್‌ನ ಬೆಲೆ 20.95 ಲಕ್ಷ ರೂ. ಈ ಹಿಂದಿನ R 1250 GS ಮಾಡಲ್‌ಗಿಂತ ಸುಮಾರು 40 ಸಾವಿರ ರೂ. ಅಧಿಕ. ಇತರ ಐಷಾರಾಮಿ ಬೈಕ್‌ಗಳಾದ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಸರಣಿಯ ಬೈಕ್‌ಗೆ 21.48 ಲಕ್ಷ ರೂ.- 31.48 ಲಕ್ಷ ರೂ.

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಸ್ಪೆಷಲ್ ಬೈಕ್‌ಗೆ 24.64 ಲಕ್ಷ ರೂ. ಇದೆ. ಟ್ರಯಂಫ್ ಟೈಗರ್ 1200 ಜಿಟಿ ಪ್ರೊ ಬೈಕ್‌ನ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ 19.19 ಲಕ್ಷ ರೂ. ಯುವ ಜನತೆಯ ನಿದ್ದೆಗೆಡಿಸಿರುವ R 1300 GS ಬೈಕ್‌ನ ವಿತರಣೆ ಈ ತಿಂಗಳಲ್ಲೇ ನಡೆಯಲಿದ್ದು, ಪ್ರತಿಸ್ಪರ್ಧಿಗಳಿಗೆ ಠಕ್ಕರ್‌ ಕೊಡಲಿದೆ ಎಂದು ತಜ್ಞರು ಊಹಿಸಿದ್ದಾರೆ.

ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್‌ 1,300cc, ಅವಳಿ-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750rpmನಲ್ಲಿ 143 bhp ಮತ್ತು 6,500rpmನಲ್ಲಿ 149 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್‌ನ ತೂಕ 237 ಕೆಜಿ. R 1250 GSಗಿಂತ 12 ಕೆಜಿ ಹಗುರವಾಗಿದೆ. ಜತೆಗೆ 19 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ.

ಇದು ಗಮನ ಸೆಳೆಯುವ ಹಸಿರು / ಹಳದಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಆದಾಗ್ಯೂ ಇದು ಅಡಾಪ್ಟಿವ್ ರೈಡ್ ಹೈಟ್ ವೈಶಿಷ್ಟ್ಯವನ್ನು ಒಳಗೊಂಡಿಲ್ಲ. ಟ್ರಿಪಲ್ ಬ್ಲ್ಯಾಕ್ ಮಾಡೆಲ್‌ನಲ್ಲಿ ಮಾತ್ರ ಎಆರ್‌ಎಚ್‌ ಲಭ್ಯ.

R 1300 GSನ ಎಲ್ಲ ಮಾಡೆಲ್‌ಗಳು ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯ. ಇದರಲ್ಲಿ ಎಲೆಕ್ಟ್ರಾನಿಕ್ ವಿಂಡ್ ಸ್ಕ್ರೀನ್, ಬೈಡಿರೆಕ್ಷನಲ್ ಕ್ವಿಕ್ ಶಿಫ್ಟರ್, ಸೆಂಟರ್ ಸ್ಟ್ಯಾಂಡ್ ಮತ್ತು ಪ್ರೊ ರೈಡಿಂಗ್ ಮೋಡ್‌ಗಳು ಸೇರಿವೆ. ಬೇಸ್ ಲೈಟ್ ವೈಟ್ ಮಾದರಿಯನ್ನು ಹೊರತುಪಡಿಸಿ ಎಲ್ಲ ಮಾಡೆಲ್‌ಗಳು ಟೂರಿಂಗ್ ಪ್ಯಾಕೇಜ್ ಹೊಂದಿವೆ.

Ad
Ad
Nk Channel Final 21 09 2023
Ad