Bengaluru 21°C
Ad

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಆರಂಭ ಯಾವಾಗ ?

Be795248885887.58a4aee28994c

ಅಮೇಜಾನ್ ಗ್ರಾಹಕರು ಮತ್ತು ಭಾರತದ ಆನ್​ಲೈನ್ ಗ್ರಾಹಕರು ಬಹಳವಾಗಿ ನಿರೀಕ್ಷಿಸುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಸದ್ಯದಲ್ಲೇ ಶುರುವಾಗುವ ಸಾಧ್ಯತೆ ಇದೆ.

ಪ್ರತೀ ವರ್ಷವೂ ಅಮೇಜಾನ್ ಈ ಶಾಪಿಂಗ್ ಉತ್ಸವ ನಡೆಸುತ್ತದೆ. ಮೊಬೈಲ್, ಲ್ಯಾಪ್​ಟಾಪ್, ಗೃಹೋಪಕರಣ ಇತ್ಯಾದಿ ಬಹಳಷ್ಟು ವಸ್ತುಗಳಿಗೆ ಈ ಶಾಪಿಂಗ್ ಫೆಸ್ಟಿವಲ್​ನಲ್ಲಿ ಸಖತ್ ಡಿಸ್ಕೌಂಟ್ ಇರಲಿದೆ.

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕಳೆದ ವರ್ಷ ಅಕ್ಟೋಬರ್ 8ಕ್ಕೆ ಆರಂಭವಾಗಿತ್ತು. ಅಮೇಜಾನ್​ನ ಪ್ರತಿಸ್ಪರ್ಧಿಯಾದ ಫ್ಲಿಪ್​ಕಾರ್ಟ್ ಕೂಡ ಇದೇ ರೀತಿಯ ಶಾಪಿಂಗ್ ಉತ್ಸವ ಪ್ರತೀ ವರ್ಷ ನಡೆಸುತ್ತದೆ. ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಈ ವರ್ಷ ಸೆಪ್ಟೆಂಬರ್ 29ರಂದು ಆರಂಭವಾಗುತ್ತದೆ.

ಅಮೇಜಾನ್ ಈ ದಿನ ಅಥವಾ ಒಂದೆರಡು ದಿನ ಮುಂಚೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಆರಂಭಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಈ ಭರ್ಜರಿ ಮಾರಾಟ ಶುರುವಾಗಬಹುದು. ಕೆಲ ವರದಿಗಳ ಪ್ರಕಾರ ಈ ವರ್ಷವೂ ಅಕ್ಟೋಬರ್ 8ರಂದೇ ಶುರುವಾಗಬಹುದು. ಆದರೆ, ಅಮೇಜಾನ್​ನಿಂದ ಇನ್ನೂ ಅಧಿಕೃತವಾಗಿ ದಿನಾಂಕ ಪ್ರಕಟವಾಗಿಲ್ಲ.

ಅಮೇಜಾನ್ ಶಾಪಿಂಗ್ ಫೆಸ್ಟಿವಲ್​ನ ಮಾರಾಟದ ಸೌಲಭ್ಯವನ್ನು ಪ್ರೈಮ್ ಮೆಂಬರ್ಸ್ ಮೊದಲು ಪಡೆಯುತ್ತಾರೆ. ಫೆಸ್ಟಿವಲ್ ಸೇಲ್ ಶುರುವಾಗ 24 ಗಂಟೆ ಮುನ್ನವೇ ಪ್ರೈಮ್ ಸದಸ್ಯರು ಶಾಪಿಂಗ್ ನಡೆಸಬಹುದು. ಈ ಶಾಪಿಂಗ್​ನಲ್ಲಿ ಹೆಚ್ಚಿನ ಡಿಸ್ಕೌಂಟ್ ಮತ್ತು ಆಫರ್​ಗಳು ಪ್ರೈಮ್ ಮೆಂಬರ್ಸ್​ಗೆ ಸಿಗುತ್ತದೆ. ಫ್ಯಾಷನ್ ಉಡುಪು, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ವಸ್ತು, ಗೃಹೋಪಕರಣ ಹೀಗೆ ವಿವಿಧ ವಸ್ತುಗಳಿಗೆ ಒಳ್ಳೆಯ ರಿಯಾಯಿತಿ ಸಿಗಲಿದೆ. ಈ ಬಾರಿ ಸ್ಯಾಮ್ಸುಂಗ್, ಆ್ಯಪಲ್, ಓಪ್ಪೋ, ಒನ್​ಪ್ಲಸ್, ರಿಯಲ್​ಮೀ ಮತ್ತಿತರ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಮೇಲೆ ಸಖತ್ ಡಿಸ್ಕೌಂಟ್ ನಿರೀಕ್ಷಿಸಬಹುದು.

Ad
Ad
Nk Channel Final 21 09 2023