ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸಲು ಮುಂದಾಗಿದೆ. ಸೆಪ್ಟೆಂಬರ್ 27 ರಂದು ಈ ಸೇಲ್ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಪ್ರೈಮ್ ಸದಸ್ಯರು ಸೆಪ್ಟೆಂಬರ್ 26ರಂದು 24 ಗಂಟೆಗೂ ಮುನ್ನ ಮೊದಲ ಪ್ರವೇಶವನ್ನು ಪಡೆಯಲಿದ್ದಾರೆ. ಇದರ ಮೂಲಕ ಬಂಪರ್ ಆಫರ್ಗಳನ್ನು ಸ್ವೀಕರಿಸಲಿದ್ದಾರೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೂಲಕ ಫ್ಯಾಷನ್, ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತು ಇತರ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಿದೆ. ಇದರ ಜೊತೆಗೆ ಆ್ಯಪಲ್ ಐಫೋನ್ 15ನನ್ನು ಉಚಿತವಾಗಿ ಗೆಲ್ಲುವ ಅವಕಾಶವನ್ನು ತೆರೆದಿಟ್ಟಿದೆ. ಅಮೆಜಾನ್ ‘ಗೆಟ್ ಸೇಲ್ ರೆಡಿ’ ಆಫರ್ನಲ್ಲಿ ಐಫೋನ್ 15 ಗೆಲ್ಲುವ ಅವಕಾಶವನ್ನು ನೀಡಿದೆ. ಗ್ರಾಹಕರು ಮೊದಲಿಗೆ ‘ಸ್ಪಿನ್ ಮತ್ತು ವಿನ್’ ಆಟವನ್ನು ಆಡಬೇಕು. ಇದರ ಮೂಲಕ ಐಫೋನ್ 15 ಗೆಲ್ಲಬಹುದಾಗಿದೆ.
ಅಮೆಜಾನ್ ಇಂಡಿಯಾದ ವೆಬ್ಸೈಟ್ ಪ್ರವೇಶಿಸಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬ್ಯಾನರ್ ಟ್ಯಾಪ್ ಮಾಡಿ. ಬಳಿಕ ಕಾಣಿಸುವ ‘ಗೆಟ್ ಸೇಲ್ ರೆಡಿ’ ಬ್ಯಾನರ್ ಸಿಗುತ್ತದೆ. ನಂತರ ‘ಚಾನ್ಸ್ ಟು ವಿನ್ ಆನ್ ಐಫೋನ್ 15’ ಅನ್ನು ಟ್ಯಾಪ್ ಮಾಡಿ. ಅದು ಅಮೆಜಾನ್ ಫನ್ ಝೋನ್ಗೆ ಕರೆದೊಯ್ಯುತ್ತದೆ. ಬಳಿಕ ‘ಸ್ಪಿನ್ ಮತ್ತು ವಿನ್’ ಆಟದ ಮೇಲೆ ಟ್ಯಾಪ್ ಮಾಡುತ್ತಾ ಚಕ್ರವನ್ನು ತಿರುಗಿಸಿ.
ನೀವು ಅದೃಷ್ಟವಂತರಾಗಿದ್ದರೆ ಐಫೋನ್ 15 ಗೆಲ್ಲುವ ಅವಕಾಶ ನಿಮ್ಮದಾಗುತ್ತೆ. ಅಮೆಜಾನ್ ಅಕ್ಟೋಬರ್ 1 ರಂದು ಈ ಆಟದ ವಿಜೇತರನ್ನು ಘೋಷಿಸುತ್ತದೆ. ಇದರ ಜೊತೆಗೆ ಅಮೆಜಾನ್ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಈ ವೇಳೆ ಆಯ್ಕೆಯ ವಸ್ತುಗಳನ್ನು ಆಫರ್ ಬೆಲೆಗೆ ಖರೀದಿಸಬಹುದಾಗಿದೆ.