ಯಾದಗಿರಿ: ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜೀನಕೇರ ತಾಂಡದಲ್ಲಿ ನಡೆದಿದೆ. ಮೃತರನ್ನು ಜೀನಕೇರ ತಾಂಡದ ನಿವಾಸಿಗಳಾದ ಒಂದೇ ಕುಟುಂಬದ ಚೇನು (22), ಕಿಶನ್ (30), ಸುಮಿ ಬಾಯಿ (30) ಸಾವನ್ನಪ್ಪಿದ್ದು, ಇನ್ನೊಬ್ಬ ಮೃತ ಬಾಲಕನ ಗುರುತು ಪತ್ತೆಯಾಗಿಲ್ಲ.
ಕುಟುಂಬಸ್ಥರು ಸೇರಿ ಈರುಳ್ಳಿ ಹಚ್ಚಲು ಜಮೀನಿಗೆ ತೆರಳಿದ್ದರು. ಈ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ರಕ್ಷಿಸಿಕೊಳ್ಳಲು ತಾಂಡಾದ ದುರ್ಗಮ್ಮ ದೇವಸ್ಥಾನದೊಳಗೆ ತೆರಳಿದ್ದರು. ಇದೇ ವೇಳೆ ಸಿಡಿಲು ಬಡಿದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ಅವಘಡ ಸಂಭವಿಸಿದ ತಕ್ಷಣವೇ ಸ್ಥಳೀಯ ಆಸತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಪ್ರಕರಣ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
Ad