ಯಾದಗಿರಿ: ಪರಿಚಿತ ಮಹಿಳೆಯನ್ನು ಪಾಳುಬಿದ್ದ ಮನೆಗೆ ಕರೆತಂದು ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿ ಹೊರವಲಯದಲ್ಲಿ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ದಿನ ರಾತ್ರಿ ತನಗೆ ಪರಿಚಯವಿದ್ದ ವಿವಾಹಿತ ಮಹಿಳೆಯನ್ನು ಬೈಕ್ನಲ್ಲಿ ಪಾಳುಬಿದ್ದ ಮನೆಗೆ ಕರೆದುಕೊಂಡು ಬಂದ ಹೇಮಂತ್ ಎಂಬಾ ಆರೋಪಿ ವಿವಾಹಿತೆ ಎಂಬುವುದನ್ನೂ ಲೆಕ್ಕಿಸದೆ ಅತ್ಯಾಚಾರ ನಡೆಸಿ ದುಷ್ಕೃತ್ಯ ಮೆರೆದಿದ್ದಾನೆ.
ಶನಿವಾರ ರಾತ್ರಿ ಘಟನೆ ನಡೆದಿದ್ದು, ನಿನ್ನೆ ರಾತ್ರಿಯಿಂದ ನಿತ್ರಾಣಗೊಂಡು ಮಹಿಳೆ ಪಾಳು ಮನೆಯಲ್ಲೇ ಬಿದ್ದಿದ್ದರು. ನಂತರ ಸ್ಥಳೀಯರು ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ. ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೇಮಂತ್ನನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 2 ಗಂಟೆ ಸುಮಾರಿಗೆ ಎಫ್ಐಆರ್ ದಾಖಲಾಗಿದೆ.