Bengaluru 22°C
Ad

ಸುರಪುರ ಉಪ ಚುನಾವಣೆ: ಯಾದಗಿರಿಯಲ್ಲಿ ಸೋಲು ಒಪ್ಪಿಕೊಂಡ ಬಿಜೆಪಿಯ ರಾಜುಗೌಡ

Raju

ಯಾದಗಿರಿ: ಸುರಪುರ ಉಪಚುನಾವಣೆ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರು 15 ನೇ ಸುತ್ತಿನ ನಂತರ ಹೊರ ನಡೆದರು. ಜನಾಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, 2023 ವಿಧಾನಸಭೆಯಲ್ಲಿ ಕೆಲ ತಪ್ಪುಗಳಿಂದ ಸೋಲನ್ನು ಅನುಭಿಸಿದ್ದೆ, ಆದರೆ ಬಯಸದೆ ಬಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, ಆದರೆ ಅನುಕಂಪ ಹಾಗೂ ರಾಜ್ಯ ಸರ್ಕಾರದ ಪ್ರಭಾವದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ತಮ್ಮ ಸೋಲನ್ನು ಅನಧಿಕೃತವಾಗಿ ಒಪ್ಪಿಕೊಂಡರು.

ಒಂದನೇ ಸುತ್ತಿನಿಂದ ಮತ ಎಣಿಕೆಯಲ್ಲಿ ಹಾಜರಿದ್ದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ 15 ನೇ ಸುತ್ತಿನ ಮತ ಎಣಿಕೆಯ ನಂತರ ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರ ನಗರದ ಸರಕಾರಿ ಪದವಿಪೂರ್ವ ಕಾಲೇಜನಿಂದ ಹೊರ ನಡೆದು ಹೋದರು.

ನಮ್ಮ ಪಕ್ಷದಲ್ಲಿಯೇ ಮೇಲಿನ ನಾಯಕರು ಕೈ ಬಿಟ್ಟಿದ್ದಾರೆ, ಎಲ್ಲವನ್ನೂ ಮುಂಬರುವ ದಿನಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸುವೆ. ಬಯಸದೆ ಬಂದ ಉಪಚುನಾವಣೆಯಲ್ಲಿ ಹಿಂದೆ ಸರಿಯದೆ ಎದುರಾಳಿಯ ವಿರುದ್ದ ಕಣದಲ್ಲಿ ಹೋರಾಡಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ರಾಜುಗೌಡ  ಹೇಳಿದರು.

Ad
Ad
Nk Channel Final 21 09 2023
Ad