Bengaluru 23°C
Ad

ಕಲ್ಲು ಹಿಡಿದು ಶೋಭಾಯಾತ್ರೆಗೆ ಹೋಗುವಂತೆ ಹಿಂದೂಗಳಿಗೆ ಕರೆ ನೀಡಿದ ಪ್ರತಾಪ್ ಸಿಂಹ

ಮುಸಲ್ಮಾನರಂತೆ ಪೆಟ್ರೋಲ್ ‌ಬಾಂಬ್, ಕಲ್ಲು ಹಿಡಿದು ಶೋಭಾಯಾತ್ರೆಗೆ ಹೋಗುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೂಗಳಿಗೆ ಕರೆ ಕೊಟ್ಟಿದ್ದು, ಈ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಯಾದಗಿರಿ: ಮುಸಲ್ಮಾನರಂತೆ ಪೆಟ್ರೋಲ್ ‌ಬಾಂಬ್, ಕಲ್ಲು ಹಿಡಿದು ಶೋಭಾಯಾತ್ರೆಗೆ ಹೋಗುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೂಗಳಿಗೆ ಕರೆ ಕೊಟ್ಟಿದ್ದು, ಈ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇಂದು ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ ಅವರು, ‘ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಬಹಳ ದೊಡ್ಡ ಶೋಭಾಯಾತ್ರೆ ಇದೆ. ಲಕ್ಷಾಂತರ ಜನ ಹಿಂದೂಗಳು ಭಾಗಿ ಆಗುತ್ತಾರೆ. ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡಲು ಬಯಸುತ್ತೇನೆ ಈ ಸರ್ಕಾರ ನಿಮ್ಮನ್ನು ರಕ್ಷಣೆ ‌ಮಾಡೋದಿಲ್ಲ, ಹೀಗಾಗಿ ಮುಸ್ಲಿಮರು ಹೇಗೆ ಪೆಟ್ರೋಲ್ ಬಾಂಬ್, ತಲ್ವಾರ್ ಬಳಸುತ್ತಾರೋ, ಹಾಗೇ ನೀವು ಕೂಡ ಸನ್ನದ್ಧರಾಗಿ‌ ಮೆರವಣಿಗೆ ಹೋಗಿ ಎಂದು ಕರೆ ಕೊಟ್ಟಿದ್ದಾರೆ.

ಇನ್ನು ನಾಗಮಂಗಲದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ನೋಡಿದರೆ ರಾಜ್ಯ ಸರ್ಕಾರಕ್ಕೆ ಗಣೇಶ ಮೆರವಣಿಗೆ, ಹಿಂದೂಗಳ ಹಬ್ಬ ಹರಿದಿನ ನಡೆಯುವುದು ಇಷ್ಟವಿಲ್ಲ ಎಂಬ ಸಂದೇಶವನ್ನ ನಾಗಮಂಗಲ ಘಟನೆ ‌ಮೂಲಕ ಹೊರ ಹಾಕಿದೆ. ಕಳೆದ ವರ್ಷ ನಾಗಮಂಗಲದ ಮೈಸೂರು ರಸ್ತೆ ಬಳಿ ದರ್ಗಾ ಎದುರು ಗಲಾಟೆ ಆಗಿತ್ತು. ಅನಗತ್ಯವಾಗಿ ಮುಸಲ್ಮಾನರು ಕಲ್ಲು ತೂರಾಟ ಮಾಡಿದ್ದರು.

ಈ ವರ್ಷ ಅದೇ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗುತ್ತದೆ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಿತ್ತು. ಆದ್ರೆ, ಅದೇ ರಸ್ತೆಯಲ್ಲಿ ಈ ಬಾರಿ ಮೆರವಣಿಗೆ ಹೋಗಬೇಕಾದರೆ ಕಲ್ಲು ತೂರಾಟ ಮಾತ್ರವಲ್ಲ, ಪೆಟ್ರೋಲ್ ಬಾಂಬ್ ಹಾಕಿ ಕಲ್ಲು, ಚಪ್ಪಲಿ ಬಿಸಾಡಿ ತಲ್ವಾರ್ ತೋರಿಸಿದರು. ಹಾಗೇ ಹಿಂದೂಗಳ ಅಂಗಡಿ ಟಾರ್ಗೆಟ್ ‌ಮಾಡಿ ಸುಟ್ಟು ಹಾಕಿದರು. ಇಷ್ಟಾದರೂ ಸಹ ಅದೇನೂ ಆಕಸ್ಮಿಕ ಘಟನೆ ಎನ್ನುವ ರೀತಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಇತ್ತು.

ಮಸೀದಿಗಳಿಂದ‌, ಮೂಲ್ಲಾಗಳಿಂದ ಎಂಥಂತಹ ಪ್ರಚೋದನಾಕಾರಿ ಹೇಳಿಕೆ ಬಂದರೂ ಕೂಡ ರಾಜ್ಯ ಸರ್ಕಾರ ಒಂದೇ ಒಂದು ದಿನಕ್ಕೂ‌ ಅವರ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ. ಮೊನ್ನೆ ‌ಪುನೀತ್, ಶರಣ ಪಂಪ್ ವೆಲ್ ಹುಡುಕಿಕೊಂಡು ಆರ್ ಎಸ್ ಎಸ್ ಕಚೇರಿಗೆ ನುಗ್ಗಿದರು. ಆದರೆ, ನಾಗಮಂಗಲ ಗಲಾಟೆಯಲ್ಲಿ ಪೆಟ್ರೋಲ್ ಬಾಂಬ್, ತಲ್ವಾರ್ ಎಲ್ಲಿಂದ ಬಂತು ಎಂದು ಮಸೀದಿಗೆ ನುಗ್ಗಿದ್ರಾ?. ಮಸೀದಿಗೆ ನುಗ್ಗೋಕೆ ಇವರ ಕೈ ಯಿಂದ ಆಗೋಲ್ಲ. ಆದರೆ ಹಿಂದೂಗಳನ್ನ ಟಾರ್ಗೆಟ್ ‌ಮಾಡೋಕೆ ಪ್ರಯತ್ನ ‌ಮಾಡುತ್ತಿದ್ದಾರೆ.

Ad
Ad
Nk Channel Final 21 09 2023