ವಿಜಯಪುರ: ಕೆಲವು ಸಮುದಾಯದವರಿಗೆ ಗಣಪತಿ ಹಬ್ಬದ ಸಂಭ್ರಮಾಚರಣೆ ಸಹಿಸಲು ಆಗುವುದಿಲ್ಲ. ಅಂಥವರು ಗಾಂಧಿ- ನೆಹರೂ ಸೇರಿ ಮಾಡಿರುವ ಪಾಕಿಸ್ತಾನಕ್ಕೆ ಹೋಗಬಹುದು. ಮೋದಿ, ಯೋಗಿ ಇರೋವರೆಗೂ ನೀವು ಇಲ್ಲಿ ಬಾಲ ಬಿಚ್ಚಲು ಸಾಧ್ಯವಿಲ್ಲ. ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲೆಲ್ಲ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿವೆ. ದೇಶದಲ್ಲಿ ಹಿಂದೂಗಳು ಹೇಳಿದಂತೆ ದೇಶ ನಡೆಯಬೇಕು. ಮುಸ್ಲಿಮರ ಮಸೀದಿ ಮುಂದೆ ಡ್ಯಾನ್ಸ್ ಮಾಡಬಾರದು, ಹಾಡು ಹಾಡಬಾರದು ಅಂದರೆ ಅವರಿಗಾಗಿ ಪ್ರತ್ಯೇಕವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಇವೆ. ಅಲ್ಲಿಗೆ ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ವಿವೇಕಾನಂದ ಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಸನಗೌಡ ಯತ್ನಾಳ್, ಕಾಂಗ್ರೆಸ್ನವರ ಕಾರಣದಿಂದ ಬಾಂಗ್ಲಾ ದೇಶದಂತೆ ಇಲ್ಲಿಯೂ ದಂಗೆ ಆಗುತ್ತದೆ. ಪಶ್ವಿಮ ಬಂಗಾಳದಲ್ಲಿ ದೆವ್ವವೊಂದು ಅಧಿಕಾರದಲ್ಲಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಮುಸ್ಲಿಂ ಜಾತಿಯಲ್ಲಾದರೂ ಹುಟ್ಟಬೇಕಿತ್ತು. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆಗಿ ಕೊಲೆಯಾದರೂ ಮಹಿಳೆಯಾಗಿರೋ ಆ ಮುಖ್ಯಮಂತ್ರಿ ಮರುಕ ವ್ಯಕ್ಯಪಡಿಸಲಿಲ್ಲ ಎಂದು ಟೀಕಿಸಿದ್ದಾರೆ. ಮೀಸಲಾತಿಯನ್ನೇ ತೆಗೆದು ಹಾಕುತ್ತೇನೆ ಎಂದು ರಾಹುಲ್ ಗಾಂಧಿ ಹೇಳುತ್ತಾನೆ. ಈ ಬಗ್ಗೆ ದಲಿತರು ಚಿಂತಿಸಬೇಕು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 10 ವರ್ಷ ಆಯ್ತು. ಈ ಮೊದಲು ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಪ್ರಧಾನಿಯಾಗಿದ್ದರು. ನಾವೇನಾದರೂ ಸಂವಿಧಾನವನ್ನು ಮುಟ್ಟಿದ್ದೇವಾ? ನಾವು ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.