Ad

ವಿಜಯಪುರದಲ್ಲಿ ರಾತ್ರಿ ಭೂಕಂಪದ ಅನುಭವ: ಮನೆಯಿಂದ ಹೊರಗೋಡಿದ ಜನರು

ಜಿಲ್ಲೆಯ ತಿಕೋಟಾ ಭಾಗದಲ್ಲಿ ಶನಿವಾರ ರಾತ್ರಿ ಭೂಕಂಪದ ಅನುಭವ ಆಗಿದ್ದು, ಭಯಗೊಂಡ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.

ವಿಜಯಪುರ: ಜಿಲ್ಲೆಯ ತಿಕೋಟಾ ಭಾಗದಲ್ಲಿ ಶನಿವಾರ ರಾತ್ರಿ ಭೂಕಂಪದ ಅನುಭವ ಆಗಿದ್ದು, ಭಯಗೊಂಡ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.

Ad
300x250 2

ಶನಿವಾರ ರಾತ್ರಿ 10-26 ರ‌ ಸುಮಾರಿಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದೆ. ಮನೆಯ ಮೇಲ್ಭಾಗದಲ್ಲಿನ ಸಾಮಗ್ರಿಗಳು ಅಲುಗಾಡಿ ಕೆಳಗೆ ಬುದ್ದಿವೆ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.

ತಿಕೋಟಾ ತಾಲೂಕಿನ ಘೋಣಸಗಿ, ಸೋಮದೇವರಹಟ್ಟಿ, ಹುಬನೂರ, ಮಲಕನದೇವರಹಟ್ಟಿ, ಕಳ್ಳಕವಟಗಿ ಟಕ್ಕಳಕಿ ಭಾಗದಲ್ಲಿ 9-26 ಕ್ಕೆ ಭೂಕಂಪನ ಅನುಭವ ಆಗಿದೆ ಎಂದು ಆಭಾಗದ ಜನರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ತಿಕೋಟಾ ಭಾಗದಲ್ಲಿ ಭೂಕಂಪದ ಸಂಭವಿಸಿರುವ ಕುರಿತು ಜಿಲ್ಲಾಡಳಿತ ಈ ವರೆಗೂ ಯಾವುದೇ ಮಾಹಿತಿ ನೀಡಿಲ್ಲ.

Ad
Ad
Nk Channel Final 21 09 2023
Ad