Ad

ತುಂಗಭದ್ರಾ ಜಲಾಶಯಕ್ಕೆ ದಿಢೀರ್ ಭೇಟಿ ಕೊಟ್ಟ ಡಿ.ಕೆ ಶಿವಕುಮಾರ್

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್‌ ಕಟ್ ಆದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದಾರೆ.

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್‌ ಕಟ್ ಆದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದಾರೆ.

ಗೇಟ್ ಲಿಂಕ್ ಚೈನ್ ಕಟ್ ಆಗಿರುವುದನ್ನು ಪರಿಶೀಲಿಸಿದ ಡಿಕೆ ಶಿವಕುಮಾರ್ ಅವರಿಗೆ ಡ್ಯಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಗೇಟ್ ಲಿಂಕ್ ಚೈನ್ ಕಟ್ ಆಗಿರುವುದನ್ನು ಖುದ್ದು ಪರಿಶೀಲನೆ ನಡೆಸಿದರು. ಚೈನ್ ಕಟ್ ಆಗಿರುವುದನ್ನು ದುರಸ್ತಿ ಮಾಡುವುದಕ್ಕೆ ಎಷ್ಟು ದಿನ ಆಗುತ್ತೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಡ್ಯಾಂ ನೀಲನಕ್ಷೆಯನ್ನು ತೋರಿಸಿದ ಅಧಿಕಾರಿಗಳು ಡಿಸಿಎಂ ಸಂಪೂರ್ಣ ಮಾಹಿತಿ ವಿವರಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕರು ಸಾಥ್ ನೀಡಿದ್ದರು. ಟಿಬಿ ಡ್ಯಾಂ ಪರಿಶೀಲನೆ ನಡೆಸಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದು ಅತ್ಯಂತ ನೋವಿನ ಸಂಗತಿ. ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯದ ರೈತರ ಜೀವನಾಡಿ ಹಾಗೂ 13 ಲಕ್ಷ ರೈತರಿಗೆ ನೀರು ಒದಗಿಸುವ ಇತಿಹಾಸ ಪ್ರಸಿದ್ಧ ಜಲಾಶಯ ಇದು. ಇಂತಹ ಡ್ಯಾಂ ಗೇಟ್ ಚೈನ್ ಕಟ್ ಆಗಿದೆ.

ನಿನ್ನೆ ಮಧ್ಯರಾತ್ರಿ ಜಲಾಶಯದ 10 ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ವೇಳೆ ಗೇಟ್ ನಂ 19ರ ಚೈನ್ ಕಟ್ ಆಗಿ ಕೊಚ್ಚಿ ಹೋಗಿದೆ. ಇದರಿಂದ ಡ್ಯಾಂಗೆ ಡ್ಯಾಮೇಜ್ ಆಗುವ ಸಾಧ್ಯತೆ ಇತ್ತು. ಆದರೆ ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಎಲ್ಲಾ ಗೇಟ್ ಓಪನ್ ಮಾಡಿ ನೀರು ಹರಿಬಿಟ್ಟಿದ್ದಾರೆ.

ನಾರಾಯಣ ಸ್ಟೀಲ್ ಹಾಗೂ ಹಿಂದೂಸ್ಥಾನ ಸ್ಟೀಲ್ ಲಿಮಿಟೆಡ್‌ ಕಂಪನಿಯನ್ನು ಸಂಪರ್ಕಿಸಿದ್ದೇವೆ. ಗೇಟ್ ಮಾದರಿಯನ್ನು ತಯಾರಿಸಲು ಹೇಳಿದ್ದೇವೆ. ಕೂಡಲೇ ಗೇಟ್ ತಯಾರಿಸುವ ಕೆಲಸ ಮಾಡಲಾಗುತ್ತಿದೆ. ಗೇಟ್ ಡ್ಯಾಮೇಜ್‌ನಿಂದ ಅಪಾರ ಪ್ರಮಾಣದ ನೀರು ಹೊರಗಡೆ ಬಿಡಲಾಗಿದೆ. 99 ಸಾವಿರ ಕ್ಯುಸೆಕ್ ನೀರು ಇದೀಗ ಹೊರ ಬಿಡಲಾಗುತ್ತಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ರೈತರಿಗೆ ಭರವಸೆ ಕೊಡುತ್ತೇವೆ. ಯಾರು ಆತಂಕ ಪಡಬೇಕಾಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Ad
Ad
Nk Channel Final 21 09 2023