Bengaluru 21°C
Ad

ಕತ್ತೆಗೂ ಬಂತು ಕಾಲ : ಸಂಬಳ ಬರೋ ಕೆಲಸ ಬಿಟ್ಟು ಕತ್ತೆ ಕಾಯ್ತಿದ್ದಾರೆ ಜನ

ವಿಜಯನಗರ: ಅತ್ತೆಗೊಂದು ಕಾಲ ಸೊಸೆಗೆ ಒಂದು ಕಾಲ ಅನ್ನೋ ಗಾದೆ ಮಾತಿದೆ. ಹಾಗೆ ಈಗ ಕತ್ತೆಗೂ ಒಂದು ಕಾಲ ಬಂದು ಬಿಟ್ಟಿದೆ.ವಿಜಯನಗರ ಜಿಲ್ಲೆಯಲ್ಲಿ ಕತ್ತೆಗೆ ಭಾರೀ ಡಿಮ್ಯಾಂಡ್​​ ಶುರುವಾಗಿದೆ. ಕೈ ತುಂಬ ಬರೋ ಸಂಬಳದ ಕೆಲಸ ಬಿಟ್ಟು ಜನ ಕತ್ತೆ ಕಾಯೋಕೆ ಮುಗಿಬೀಳುತ್ತಿದ್ದಾರೆ.

ವಿಜಯನಗರ: ಅತ್ತೆಗೊಂದು ಕಾಲ ಸೊಸೆಗೆ ಒಂದು ಕಾಲ ಅನ್ನೋ ಗಾದೆ ಮಾತಿದೆ. ಹಾಗೆ ಈಗ ಕತ್ತೆಗೂ ಒಂದು ಕಾಲ ಬಂದು ಬಿಟ್ಟಿದೆ.ವಿಜಯನಗರ ಜಿಲ್ಲೆಯಲ್ಲಿ ಕತ್ತೆಗೆ ಭಾರೀ ಡಿಮ್ಯಾಂಡ್​​ ಶುರುವಾಗಿದೆ. ಕೈ ತುಂಬ ಬರೋ ಸಂಬಳದ ಕೆಲಸ ಬಿಟ್ಟು ಜನ ಕತ್ತೆ ಕಾಯೋಕೆ ಮುಗಿಬೀಳುತ್ತಿದ್ದಾರೆ.

ಶಾಲೆಗೆ ಹೋಗದ ಮಕ್ಕಳಿಗೆ, ಕೆಲಸಕ್ಕೆ ಹೋಗದ ಹುಡುಗರಿಗೆ ಕತ್ತೆ ಕಾಯೋಕೆ ಹೋಗು ಅಂತ ನಮ್ಮ ದೊಡ್ಡೋರು ಹೇಳುತ್ತಿದ್ದರು. ಆದ್ರೆ ಈಗ ಕತ್ತೆಗೂ ಒಂದು ಕಾಲ ಬಂದ್ಬಿಟ್ಟಿದೆ. ಹಾಲು ಅಂದಾಕ್ಷಣ ಮೊದಲು ನೆನಪಿಗೆ ಬರೋದು ಹಸು ಹಾಲು. ಇಲ್ಲಾ ಎಮ್ಮೆ ಹಾಲು, ಆದ್ರೆ ಹಸು ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು, ರಾಜ್ಯದಲ್ಲಿಗ ಕತ್ತೆದೇ ಹವಾ ಶುರುವಾಗಿ ಬಿಟ್ಟಿದೆ.

ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದು, ಜನ ಕತ್ತೆ ಕಾಯೋದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹೊಸಪೇಟೆಯ ಸಾಕಷ್ಟು ಜನ, ಕತ್ತೆ ಸಾಕೋದ್ರಿಂದ ಪ್ರತಿ ತಿಂಗಳು 70 ಸಾವಿರಕ್ಕಿಂತಲೂ ಹೆಚ್ಚಿನ ಆದಾಯ ಬರ್ತಿದೆಯಂತೆ. ಜೊತೆಗೆ ಈ ಸುದ್ದಿ ಕೇಳಿ ಕೆಲವರು ಮಾಡ್ತಿದ್ದ ಕೆಲಸ, ವ್ಯಾಪಾರವನ್ನೆಲ್ಲಾ ಬಿಟ್ಟು ಕತ್ತೆ ಕಾಯೋದೇ ಬ್ಯುಸಿನೆಸ್​​ ಮಾಡಿಕೊಳ್ಳೋ ತಯಾರಿ ನಡೆಸಿದ್ದಾರೆ.

ಕತ್ತೆ ಸಾಕಿ ಬ್ಯುಸಿನೆಸ್ ಮಾಡೋರಿಗೆ 3 ಲಕ್ಷ ರೂಪಾಯಿ ಹಣ ಜೆನ್ನಿ ಸಂಸ್ಥೆಗೆ ಕೊಟ್ಟಾಗ ಕತ್ತೆಗಳನ್ನ ಸಪ್ಲೈ ಮಾಡುತ್ತೆ. 3 ವರ್ಷ ಅಗ್ರಿಮೆಂಟ್ ಮಾಡ್ಕೊಂಡು 3 ಹೆಣ್ಣು ಕತ್ತೆ ಕೊಟ್ಟು, ಬಾಂಡ್ ಮಾಡಿಸಿದ 20 ದಿನಗಳ ನಂತರ 3 ಮರಿ ಕತ್ತೆಗಳನ್ನ ಕೊಡ್ತಾರೆ. ಕತ್ತೆ ಸಾಕೋದಕ್ಕೆ ಅಂತ ಕೊಟ್ಟು, ಆಮೇಲೆ ಅವರಿಂದ ಹಾಲನ್ನ ಕಲೆಕ್ಟ್ ಮಾಡ್ತಾರೆ. ಪ್ರತಿ ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 2,300 ರೂಪಾಯಿನಂತೆ ಕಂಪನಿ ಖರೀದಿ ಮಾಡುತ್ತೆ. ಕತ್ತೆ ಸಾಕಿದವರು ತಿಂಗಳಿಗೆ ಏನಿಲ್ಲ ಅಂದ್ರೂ 80 ರಿಂದ 90 ಸಾವಿರ ರೂಪಾಯಿಗಳಿಗೂ ಹೆಚ್ಚಾಗಿ ಆದಾಯ ಬರ್ತಿದೆ ಅಂತ ಕತ್ತೆ ಸಾಕುತ್ತಾ ಇರೋರು ಹೇಳ್ತಿದ್ದಾರೆ.

ಚಿಕ್ಕಮಕ್ಕಳು, ಅಸ್ತಮಾ ರೋಗಿಗಳಿಗೆ ಕತ್ತೆ ಹಾಲು ರಾಮಬಾಣ ಎನ್ನಲಾಗುತ್ತೆ
ಕತ್ತೆ ಹಾಲಿನ ವಿಟಮಿನ್​, ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯಕ್ಕೆ ಉತ್ತಮ
ಇತರೆ ಡೈರಿ ಹಾಲುಗಳಿಗಿಂತ ಕತ್ತೆ ಹಾಲು ತಾಯಿಯ ಎದೆ ಹಾಲನ್ನು ಹೋಲುತ್ತದೆ
ಹಾಲಿನಲ್ಲಿರುವ ಲ್ಯಾಕ್ಟೋಸ್​​ ಕ್ಯಾಲ್ಸಿಯಂನಿಂದ ಮೂಳೆಗಳ ಬಲ ಹೆಚ್ಚಿಸುತ್ತದೆ
ಸೋಪ್, ಕ್ರೀಮ್, ವಿವಿಧ ಪ್ರಾಡಕ್ಟ್​​​ಗಳ ತಯಾರಿಕೆಗೂ ಬಳಕೆ ಮಾಡಲಾಗುತ್ತದೆ
ದೇಹದ ಕೆಟ್ಟ ಬ್ಯಾಕ್ಟೀರಿಯಗಳನ್ನು ನಿವಾರಿಸಿ, ಆರೋಗ್ಯ ವೃದ್ಧಿಸಲು ಸಹಕಾರಿ
ಭಾರತದ ಮಾತ್ರವಲ್ಲ ವಿದೇಶಗಳಲ್ಲೂ ಕತ್ತೆಯ ಹಾಲಿಗೆ ಭಾರೀ ಬೇಡಿಕೆ ಇದೆ

 

Ad
Ad
Nk Channel Final 21 09 2023