ಕಾರವಾರ: ಜುಲೈ ತಿಂಗಳಿನಲ್ಲಿ ಸಂಭವಿಸಿದ್ದ ಶಿರೂರು ಭೂಕುಸಿತ ದುರಂತದ ಹಿನ್ನಲೆ ಇದೀಗ ಮತ್ತೆ ಶವಗಳ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಭೂಕುಸಿತವಾಗಿ 11 ಜನ ಮೃತಪಟ್ಟಿದ್ದು, 8 ಜನರ ಶವ ಶೋಧ ಮಾಡಲಾಗಿತ್ತು. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತದೇಹಗಳು ದೊರೆಯದೇ ಮುಳುಗು ತಜ್ಞರು ಶೋಧ ನಡೆಸಿದರೂ ಮಳೆಯ ಕಾರಣ ಯತ್ನಗಳು ವಿಫಲವಾಗಿದ್ದವು. ಹೀಗಾಗಿ ಜುಲೈ 28 ರಂದು ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಇದರ ನಂತರ ಶೋಧಕ್ಕೆ ಪ್ರಯತ್ನ ನಡೆಸಿದರೂ ಗಂಗಾವಳಿ ನದಿಯಲ್ಲಿ ಮಳೆಯಿಂದ ನೀರು ಹೆಚ್ಚಾದ ಪರಿಣಾಮ ಮುಳುಗು ತಜ್ಞರು ಸಹ ಕೈಚೆಲ್ಲಿ ಕೂರುವಂತಾಗಿತ್ತು.
ಈ ಹಿನ್ನೆಲೆಯಲ್ಲಿ ಗೋವಾದ ಅಭಿಷೇನಿಯ ಓಷನ್ ಸರ್ವಿಸಸ್ ಕಂಪನಿಗೆ 90 ಲಕ್ಷದ ಟೆಂಡರ್ ನೀಡಿ ಇದೀಗ ಕಾರವಾರಕ್ಕೆ ಡ್ರಜ್ಜಿಂಗ್ ಬೋಟ್ ತರಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ನಡೆಸಲಿದೆ.
Ad