Bengaluru 23°C
Ad

ಶಿರೂರು ಗುಡ್ಡ ಕುಸಿತ ಪ್ರಕರಣ: ಅರ್ಜುನ್ ಲಾರಿಯ ಕ್ರ್ಯಾಶ್ ಕಾರ್ಡ್​ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ಈ ವೇಳೆ ಕೇರಳದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಕಾರ್ಡ್​ ಡ್ರೆಜ್ಜರ್ ಯಂತ್ರದ ಮೂಲಕ ಪತ್ತೆ ಆಗಿದೆ.

ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್​ ನಿರ್ದೇಶನದಂತೆ ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಶಾಸಕ ಸತೀಶ್ ಸೈಲ್ ಮತ್ತು ಎಸ್​ಪಿ ನಾರಾಯಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್​ ಪ್ರತಿಕ್ರಿಯಿಸಿದ್ದು, ನಾವು ಈ ಹಿಂದೆ ಸೂಚಿಸಿದ್ದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ನಮ್ಮ ತಂಡದ ಮಾಹಿತಿ ಪ್ರಕಾರ ನಾಲ್ಕನೇ ಪಾಯಿಂಟ್​​ನಲ್ಲಿ ಲಾರಿ ಇದೆ. ಈ ನಾಲ್ಕನೇ ಪಾಯಿಂಟ್ ನದಿಯ ಆಳದಲ್ಲಿ ಇದ್ದು ಅಲ್ಲಿ ಅಪಾರ ಮಣ್ಣು ಇದೆ ಎಂದಿದ್ದಾರೆ.

ಉತ್ತರ ಕನ್ನಡ ಎಸ್​ಪಿ ಎಂ.ನಾರಾಯಣ ಪ್ರತಿಕ್ರಿಯಿಸಿದ್ದು, 4 ದಿನದಿಂದ ಕಾರ್ಯಾಚರಣೆ ವೇಳೆ ಕೆಲವು ವಸ್ತುಗಳು ಸಿಕ್ಕಿವೆ. ಸಿಕ್ಕ ವಸ್ತುಗಳೆಲ್ಲ ಹೋಟೆಲ್​​, ಲಾರಿ ಟ್ಯಾಂಕರ್​​ಗೆ ಸಂಬಂಧಿಸಿವೆ. ಇನ್ನೂ ಆರು ಸ್ಥಳಗಳಲ್ಲಿ ಕಾರ್ಯಾಚರಣೆಯನ್ನ ಮಾಡಬೇಕಿದೆ. ಸರ್ಕಾರ 10 ದಿನ ಕಾರ್ಯಾಚರಣೆಗೆ ಅನುಮತಿ ನೀಡಿದೆ. ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಗಂಗಾವಳಿ ನದಿಯಲ್ಲಿ ತಮಿಳುನಾಡು ಮೂಲದ ಚಿನ್ನಣ್​ರವರ ಗ್ಯಾಸ್ ಟ್ಯಾಂಕರ್​ನ ಹಿಂಭಾಗದ ಎಕ್ಸೆಲ್ ಸಮೇತ ನಾಲ್ಕು ಚಕ್ರ ಪತ್ತೆ ಆಗಿದೆ. ಕೆಲ ದಿನದ ಹಿಂದೆ ಕಾರ್ಯಾಚರಣೆಯಲ್ಲಿ ಮುಂಭಾಗದ ಚಕ್ರ ಮತ್ತು ಬಾನೆಟ್ ಪತ್ತೆ ಆಗಿತ್ತು. ನಿನ್ನೆ ಕೇರಳ ಮೂಲದ ಅರ್ಜುನ್ ಲಾರಿಯಲ್ಲಿದ್ದ ಕಟ್ಟಿಗೆ ತುಂಡು, ಮೃತ ಲಕ್ಷಣ್ ರವರ ಸ್ಕೂಟಿ, ಹಾಗೂ ಹೋಟೆಲ್​ ಪಾತ್ರೆಗಳು ಪತ್ತೆ ಆಗಿತ್ತು. ಇನ್ನೂ ಆರು ದಿನಗಳ ಕಾರ್ಯಾಚಾರಣೆ ಮುಂದುವರೆಯಲಿದೆ.

Ad
Ad
Nk Channel Final 21 09 2023