ಕಾರವಾರ: ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಹೋದರರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ. ಸಂದೇಶ್ ಪ್ರಭಾಕರ್ ಬೋರ್ಕರ್, ಹತ್ಯೆಯಾದ ವ್ಯಕ್ತಿ. ಮನೀಶ್ ಕಿರಣ್ ಬೋರ್ಕರ್ ಹತ್ಯೆ ಮಾಡಿದ ಆರೋಪಿ. ಘಟನೆಯಲ್ಲಿ ಶರತ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಹಿನ್ನೆಲೆ:
ಪ್ರತೀ ವರ್ಷ ಗಣಪತಿ ಹಬ್ಬದಂದು ಶಿರಸಿಯಿಂದ ಬರುವ ಕುಟುಂಬಸ್ಥರು ಕಾರವಾರದಲ್ಲಿ ಎಲ್ಲರೂ ಸೇರಿ ಗಣೇಶನ ಹಬ್ಬ ಮಾಡ್ತಿದ್ರು. ಪ್ರಭಾಕರ್ ಎಂಬವರು ಕಳೆದ ವರ್ಷದ ಹಣದ ಲೆಕ್ಕ ನೀಡಿಲ್ಲ ಎಂದು ಕುಟುಂಬಸ್ಥರು ಗಲಾಟೆ ಎಬ್ಬಿಸಿದ್ರು. ಈ ವೇಳೆ ಪ್ರಭಾಕರ್ ಮಕ್ಕಳಾದ ಸಂದೇಶ ಹಾಗೂ ಶರತ್ ಸಹಾಯಕ್ಕೆ ಬಂದಿದ್ರು. ಇದನ್ನು ನೋಡಿ ಪ್ರಭಾಕರ್ ತಂಗಿ ಮಕ್ಕಳಾದ ಕಿರಣ್, ಪ್ರಶಾಂತ್, ರತನ್, ಮನೀಶ್ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಉಳಿದವರು ಸಂದೇಶನನ್ನು ಕೆಳಗೆ ಬೀಳಿಸಿದ್ರೆ, ಮನೀಶ್ ಚಾಕು ಹಿಡಿದು ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಸಂದೇಶ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮನೀಶ್ ಕಿರಣ್ ಹಾಗೂ ಉಳಿದವರನ್ನು ಬಂಧಿಸಿದ್ದಾರೆ.. ಕೊಲೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಕೊಲೆ ಘಟನೆ ಹಿನ್ನೆಲೆ ವಿಚಾರಣೆ ಮುಂದುವರಿಸಿರುವ ಪೊಲೀಸರು. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.