Ad

ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

ಶಾಸಕ ದಿನಕರ ಶೆಟ್ಟಿ, ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಸಹೋದರ ಹಾಗೂ ಅವರ ಪತ್ನಿಗೆ ಗಾಯವಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಕುಮಟಾ: ಶಾಸಕ ದಿನಕರ ಶೆಟ್ಟಿ, ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಸಹೋದರ ಹಾಗೂ ಅವರ ಪತ್ನಿಗೆ ಗಾಯವಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿದೆ.

Ad
300x250 2

ಪಟ್ಟಣದ ಕೊಪ್ಪಳಕರವಾಡಿ ವಾರ್ಡ್ ನಲ್ಲಿದ್ದ ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರ ಮನೆ ಇದಾಗಿದ್ದು ಶನಿವಾರ ಕುಟುಂಬ ಸಮೇತರಾಗಿ ಹೊರಹೋಗಿದ್ದರು ಎನ್ನಲಾಗಿದೆ. ಅವರು ಮನೆಗೆ ಬಂದು ಬಾಗಿಲು ತೆರೆದಾಗ ಸಿಲಿಂಡ‌ರ್ ಸ್ಫೋಟಗೊಂಡಿದೆ.

ಈ ವೇಳೆ ಮಧುಕರ ಶೆಟ್ಟಿ ಅವರ ಪತ್ನಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮನೆಯ ಒಳಭಾಗ ಹೊತ್ತಿ ಉರಿದಿದ್ದು, ಟಿವಿ,ಪೀಠೋಪಕರಣ, ಬಟ್ಟೆ ಸೇರಿದಂತೆ ಮನೆಯಲ್ಲಿದ್ದ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.

Ad
Ad
Nk Channel Final 21 09 2023
Ad