Bengaluru 20°C

ಮಣಿಪಾಲ: ಅಪಾಯಕಾರಿ ವೀಲಿಂಗ್ ಮಾಡಿ ರೀಲ್ಸ್‌ ಮಾಡುತ್ತಿದ್ದ ಯುವಕನ ಬಂಧನ

ಸಹಸವಾರನನ್ನು ಅಪಾಯಕರ ರೀತಿಯಲ್ಲಿ ಕುಳ್ಳಿರಿಸಿಕೊಂಡು ರೀಲ್ಸ್‌ಗಾಗಿ ವೀಲಿಂಗ್ ಮಾಡುತ್ತಿದ್ದ ಸ್ಕೂಟ‌ರ್ ಸವಾರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಉಡುಪಿ: ಸಹಸವಾರನನ್ನು ಅಪಾಯಕರ ರೀತಿಯಲ್ಲಿ ಕುಳ್ಳಿರಿಸಿಕೊಂಡು ರೀಲ್ಸ್‌ಗಾಗಿ ವೀಲಿಂಗ್ ಮಾಡುತ್ತಿದ್ದ ಸ್ಕೂಟ‌ರ್ ಸವಾರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.


ಆತ್ರಾಡಿ ಗ್ರಾಮದ ನಿವಾಸಿ ಮುಹಮ್ಮದ್ ಆಶಿಕ್ (19) ಬಂಧಿತ ಯುವಕ. ಆಶಿಕ್ ತನ್ನ ದ್ವಿಚಕ್ರ ವಾಹನದಲ್ಲಿ ಮಣಿಪಾಲ ಈಶ್ವರ ನಗರದಿಂದ ವಿದ್ಯಾರತ್ನ ನಗರದ ಕಡೆಗೆ ತೆರಳುವ ರಸ್ತೆಯಲ್ಲಿ ಅಪಾಯ ತರುವ ರೀತಿಯಲ್ಲಿ ವೀಲಿಂಗ್ ನಡೆಸುತ್ತಿದ್ದ.


ಈತ ವೀಲಿಂಗ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು. ಅಲ್ಲದೇ ಈತ ಹೆಲ್ಮಟ್ ಕೂಡ ಹಾಕಿರಲಿಲ್ಲ. ಆತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Nk Channel Final 21 09 2023