Bengaluru 28°C
Ad

ಬರವಣಿಗೆಗೆ ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯಿದೆ: ಡಾ. ಶ್ರೀಕಾಂತ ರಾವ್

ಉಡುಪಿ ಸುಹಾಸಂ ಆಶ್ರಯದಲ್ಲಿ ದಿನೇಶ್ ಉಪ್ಪೂರ ಅವರ ಪ್ರವಾಸ ಕಥನ ‘ಪ್ರವಾಸಾನುಭಗಳ ಪುಸ್ತಕ’ವನ್ನು ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್‌ನಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಉಡುಪಿ: ಉಡುಪಿ ಸುಹಾಸಂ ಆಶ್ರಯದಲ್ಲಿ ದಿನೇಶ್ ಉಪ್ಪೂರ ಅವರ ಪ್ರವಾಸ ಕಥನ ‘ಪ್ರವಾಸಾನುಭಗಳ ಪುಸ್ತಕ’ವನ್ನು ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್‌ನಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಡಾ.ಶ್ರೀಕಾಂತ ರಾವ್ ಸಿದ್ಧಾಪುರ ಅವರು, ನಮ್ಮ ಮನಸ್ಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳ ಬೇಕು. ಅದರಲ್ಲಿ ಸಿಗುವ ಆನಂದದಿಂದ ನಮ್ಮಲ್ಲಿರುವ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ ಎಂದರು.

ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ವಹಿಸಿದ್ದರು. ಲೇಖಕ ದಿನೇಶ್ ಉಪ್ಪೂರು ಉಪಸ್ಥಿತರಿದ್ದರು.

ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ವಂದಿಸಿದರು.

Ad
Ad
Nk Channel Final 21 09 2023
Ad