ಉಡುಪಿ: ರೋಟರಿ ಬ್ರಹ್ಮಾವರ ಝೋನ್ 3, ರಿ ಡಿ.3182 ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷೀಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ ಇವರ ಜಂಟಿ ಸಾರಥ್ಯದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ 2024 ಸಂಗಮ ರೋಟರಿ ಬಂಧುಗಳು ಮತ್ತು ಛಾಯಾಗ್ರಾಹಕರ ಸಮಾಗಮ ಆಗಸ್ಟ್. 19 ರಂದು ರೋಟರಿ ಭವನ ಬ್ರಹ್ಮಾವರ ದಲ್ಲಿ ನಡೆಯಿತು.
ಇನ್ನು ವಿಶ್ವ ಛಾಯಾಗ್ರಹಣ ದಿನಾಚರಣೆ 2024 ಅಂಗವಾಗಿ ಗೌರವ ಸನ್ಮಾನವನ್ನು ನಿತ್ಯಾನಂದ ಕೆ ಹಿರಿಯ ಸದಸ್ಯರು ಎಸ್ ಕೆ.ಪಿ.ಯೆ ಬ್ರಹ್ಮಾವರ ವಲಯ., ನೋರ್ಬಟ್ ಕ್ರಾಸ್ತ ಹಿರಿಯ ಸದಸ್ಯರು ಎಸ್. ಕೆ.ಪಿ ಯೆ ಮಂಗಳೂರು ವಲಯ ಹಾಗೂ ಸಿಲ್ವಿಯಾ ಕೊರ್ಡೆರು ಪ್ರಪಥಮ ಅಧ್ಯಕ್ಷರು ಎಸ್. ಕೆ.ಪಿ.ಯೆ ಬೆಳ್ತಂಗಡಿ ವಲಯ ಇವರು ಸ್ವಿಕರಿಸಿದರು.
ಬಳಿಕ ಹಲಸು ಮೇಳ ರೀಲ್ಸ್ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ರೋಟರಿ ಮತ್ತು ಛಾಯಾಗ್ರಾಹಕರಿಗೆ ಮನೋರಂಜನಾ ಆಟಗಳು ಹಾಗು ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ರೊ. ಆರೂರು ಶ್ರೀಧರ ವಿ.ಶೆಟ್ಟಿ (ಅಧ್ಯಕ್ಷರು. ರೋಟರಿ ಬ್ರಹ್ಮಾವರ., ರೊ. ಉದಯ ಪೂಜಾರಿ ಕಾರ್ಯದರ್ಶಿ, ರೋಟರಿ ಬ್ರಹ್ಮಾವರ., ಆಲ್ವಿನ್ ಆಂದ್ರಾದೆ ಅಧ್ಯಕ್ಷರು ಎಸ್. ಕೆ. ಪಿ ಎ ಬ್ರಹ್ಮಾವರ ವಲಯ., ಪ್ರತೀಷ್ ಬ್ರಹ್ಮಾವರ ಪ್ರಧಾನ ಕಾರ್ಯರ್ಶಿ ಎಸ್.ಕೆ.ಪಿ. ಎ ಬ್ರಹ್ಮಾವರ ವಲಯ., ಆರೂರು ತಿಮ್ಮಪ್ಪ ಶೆಟ್ಟಿ ವೈತ್ತಿ ಸೇವಾ ನಿರ್ದೇಶಕರು ರೋಟರಿ ಬ್ರಹ್ಮಾವರ., ಪ್ರದೀಪ್ ಉಪ್ಪೂರು ಎಸ್. ಕೆ. ಪಿ. ಎ ಛಾಯಾ ಪ್ರತಿನಿಧಿ ಬ್ರಹ್ಮಾವರ ವಲಯ ಉಪಸ್ಥಿತರಿದ್ದರು.