Bengaluru 23°C
Ad

ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಕಳ: ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಕಾರ್ಕಳ ಗೌರಿ ನರ್ಸರಿಯ ಆದಿತ್ಯ ಕುಡ್ವ ಅವರ ಪ್ರಾಯೋಜಕತ್ವದ ವಿವಿಧ ಹಣ್ಣಿನ ಹಾಗೂ ಹೂವಿನ ಸಸ್ಯಗಳನ್ನು ಸ್ಕೌಟ್ ಅಂಡ್ ಗೈಡ್ ಮಕ್ಕಳಿಗೆ ನೀಡುವ ಮುಖೇನ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಜಿಲ್ಲಾ ಸಹಾಯಕ ಗೈಡ್ ಆಯುಕ್ತರು ಆದಂತಹ ಶ್ರೀಮತಿ ವಿದ್ಯಾ ವಿ ಕಿಣಿಯವರು ಮಕ್ಕಳಿಗೆ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಸ (2)

ಗೈಡರ್ ಸೀಮಾ ಕಾಮತ್ ಅವರು ಮಕ್ಕಳಿಗೆ ಮಾರ್ಗದರ್ಶನವಿತ್ತರು. ಸ್ಕೌಟರ್ ಸುಜಾತ ಹೆಗ್ಡೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದಂತಹ ಶ್ರೀಮತಿ ಗಾಯತ್ರಿ ಕಿಣಿ ,ಶ್ರೀಮತಿ ರಾಧಿಕಾ ಶೆಣೈ, ಪುಷ್ಪ, ಅರ್ಚನಾ ಕಿಣಿ ಹಾಗೂ ಶ್ರೀಮತಿ ಶುಭಲಕ್ಷ್ಮಿ ಇವರು ಉಪಸ್ಥಿತರಿದ್ದರು.

ಮಕ್ಕಳು ಪರಿಸರ ದಿನಾಚರಣೆಗೆ ಸಂಬಂಧಪಟ್ಟ ವಿವಿಧ ಭಿತ್ತಿ ಪತ್ರ ಹಾಗೂ ಫಲಕಗಳನ್ನು ತಯಾರಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ಸಾರಿದರು. ಗಿಡಗಳಿಗೆ ಸಂಭಂದಿಸಿದ ಸ್ವರಚಿತ ಹಾಡನ್ನು ಹಾಡಿದರು.

Ad
Ad
Nk Channel Final 21 09 2023
Ad