Bengaluru 16°C

ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ: ಅದೇ ಬಸ್ಸಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ವಿಶು ಶೆಟ್ಟಿ

ಉಡುಪಿ ನಗರದ ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಉಡುಪಿ: ಉಡುಪಿ ನಗರದ ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.


ವಿಷಯ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಗಾಯಾಳು ಮಹಿಳೆಯನ್ನು ಅದೇ ಬಸ್‌ನ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55) ಎಂದು ಗುರುತಿಸಲಾಗಿದೆ.


ಮಹಿಳೆ ಕೆಳಕ್ಕೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಬಲತೋಳಿನ ಮೂಳೆ ಸಂಪೂರ್ಣ ಮುರಿದಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸಂಚಾರಿ ಠಾಣೆಗೆ ಹಾಗೂ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.


Nk Channel Final 21 09 2023