Bengaluru 16°C

ಚಲಿಸುತ್ತಿದ್ದ ಬೈಕ್‌ ನಿಂದ ರಸ್ತೆಗೆ ಬಿದ್ದ ಮಹಿಳೆ: ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ದ್ವಿಚಕ್ರ ವಾಹನದಲ್ಲಿ ಮಧ್ಯ ವಯಸ್ಕ ಮಹಿಳೆಯರು ತೆರಳುವಾಗ ಬಹಳ ಜಾಗೃತರಾಗಿರಬೇಕು. ವಯಸ್ಕ ಮಹಿಳೆಯರನ್ನು ಒನ್ ಸೈಡ್ ಕೂರಿಸಿ ಕರೆದುಕೊಂಡು ಹೋಗೋದು ಅಪಾಯವೇ.

ಉಡುಪಿ: ದ್ವಿಚಕ್ರ ವಾಹನದಲ್ಲಿ ಮಧ್ಯ ವಯಸ್ಕ ಮಹಿಳೆಯರು ತೆರಳುವಾಗ ಬಹಳ ಜಾಗೃತರಾಗಿರಬೇಕು. ವಯಸ್ಕ ಮಹಿಳೆಯರನ್ನು ಒನ್ ಸೈಡ್ ಕೂರಿಸಿ ಕರೆದುಕೊಂಡು ಹೋಗೋದು ಅಪಾಯವೇ. ಇಂತಹದೊಂದು ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಸಂಭವಿಸಿದೆ.


ಹೌದು, ದ್ವಿಚಕ್ರ ವಾಹನದಲ್ಲಿ ಮಹಿಳೆಯೊಬ್ಬರನ್ನು ಕರೆದುಕೊಂಡು ಹೋಗುವಾಗ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ. ಬೈಕ್ ನ ಕ್ಲಚ್ ಬಿಡುವ ಸಂದರ್ಭದಲ್ಲಿ ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.


ಕೂಡಲೇ ಸ್ಥಳೀಯರು ಸಹಾಯಕ್ಕೆ ಬಂದು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


Nk Channel Final 21 09 2023