Bengaluru 21°C

ಮೀನುಗಾರಿಕಾ ಋತು ಆರಂಭ: ಯಾಂತ್ರೀಕೃತ ಮೀನುಗಾರಿಕೆಗೆ ಗಾಳಿ ಮಳೆಯ ಅಡ್ಡಿ

Udupi (3)

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡಿದೆ. ಜುಲೈ 31ಕ್ಕೆ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿ ಕೊನೆಗೊಂಡಿದೆ.


ಆದರೆ ಈ ವರ್ಷ ಮಳೆಯ ಅಬ್ಬರದಿಂದಾಗಿ ಮೀನುಗಾರಿಕೆ ತುಸು ತಡವಾಗಿ ಪ್ರಾರಂಭಗೊಳ್ಳಲಿದೆ.ಕಳೆದ ಒಂದು ವಾರದಿಂದ ಗಾಳಿ ಮಳೆಯಾಗುತ್ತಿದ್ದು ಮೀನುಗಾರರಿಗೆ ತೊಡಕಾಗಿ ಪರಿಣಮಿಸಿದೆ. ಈಗಾಗಲೇ ಮೀನುಬೇಟೆಗೆ ಸಜ್ಜಾಗಿರುವ ಮೀನುಗಾರರು ಮತ್ತು ಬೋಟ್ ಮಾಲೀಕರು ಬಲೆಗಳನ್ನು ಸಜ್ಜುಗೊಳಿಸಿ ಅಗತ್ಯ ತಯಾರಿ ನಡೆಸಿ ಕಾಯುತ್ತಿದ್ದಾರೆ.
Screenshot 2024 08 03 175450


ಆದರೆ ಪ್ರಕೃತಿ ಇನ್ನೂ ಮೀನುಗಾರಿಕೆಗೆ ಪೂರಕವಾಗಿ ಪರಿಣಮಿಸಿಲ್ಲ. ಕರ್ನಾಟಕ ಕರಾವಳಿಯಲ್ಲಿ ಕೈಗೊಳ್ಳುವ ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್‌ 1ರಿಂದ ಜುಲೈ 31ರ ವರೆಗೆ ನಿಷೇಧಿಸಿ ಸರಕಾರ ಆದೇಶ ಹೊರಡಿಸುತ್ತದೆ. ಇದು ಪ್ರತೀ ಮಳೆಗಾಲದ ಸಂಪ್ರದಾಯ.
Screenshot 2024 08 03 175503


ಈ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವಂತಿಲ್ಲ. ಆದರೆ ಮಳೆಗಾಲದಲ್ಲಿ 10 ಅಶ್ವಶಕ್ತಿವರೆಗಿನ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಿಕ, ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಅನುಮತಿ ಇದೆ.


Nk Channel Final 21 09 2023