Bengaluru 24°C
Ad

ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗೆ ಮುಕ್ತಿ ಯಾವಾಗ?

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಉಡುಪಿ ಜನರನ್ನು ಕಾಡುತ್ತಿದೆ.

ಉಡುಪಿ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಉಡುಪಿ ಜನರನ್ನು ಕಾಡುತ್ತಿದೆ. ರೈಲ್ವೆ ಸೇತುವೆ ಗರ್ಡರ್ ಬಂದ ತಿಂಗಳೊಳಗೆ ಕಾಮಗಾರಿ ಶುರುವಾಗಿ ಎರಡು ಮೂರು ತಿಂಗಳಲ್ಲಿ ಸೇತುವೆ ಸಂಚಾರ ಮುಕ್ತವಾಗಲಿದೆ ಎಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ವರ್ಷದ ಹಿಂದೆಯೇ ಹೇಳಿದ್ದರು. ಆದರೆ, ಇಲ್ಲಿನ ಸ್ಥಿತಿಯೇ ಬೇರೆಯಿದೆ.

ಗರ್ಡರ್ ಬಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಮುಂದೆ ಹೋಗುತ್ತಲೇ ಇಲ್ಲ. ಕಾರಣ ಒಂದು ನಟ್, ಬೋಲ್ಡ್ ಫಿಟ್ ಮಾಡಲೂ ರೈಲ್ವೇ ಇಲಾಖೆಯವರು ಅನುಮತಿಸಬೇಕು. ಇಲಾಖೆ ಅಧಿಕಾರಿಗಳನ್ನು ಹಿಡಿಯುವುದೇ ಗುತ್ತಿಗೆದಾರರಿಗೆ ಸವಾಲಾಗಿದೆ. ಇಲ್ಲಿನ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಹಲವು ವರ್ಷ ಕಳೆದರೂ ರೈಲ್ವೇ ಸೇತುವೆ ಮಾತ್ರ ಐದು ವರ್ಷದಿಂದ ಕಾಮಗಾರಿಯನ್ನೇ ಕಂಡಿಲ್ಲ. ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿತ್ಯವೂ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ.

ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಪರೀತ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಸಂಭವಿಸಿ ಜನರು ತೊಂದರೆ ಅನುಭವಿಸುವಂತಾಗುತ್ತದೆ. ಜನರ ಓಡಾಟಕ್ಕಂತೂ ಇಲ್ಲಿ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರೈಲ್ವೇ ಸೇತುವೆ ನಿರ್ಮಾಣಕ್ಕೆ ಗರ್ಡ‌ರ್ ಬಂದು ವರ್ಷ ಕಳೆಯುತ್ತಾ ಬಂದರೂ ಇನ್ನೂ ಸೇತುವೆ ಕೆಲಸ ಚುರುಕು ಪಡೆದಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

Ad
Ad
Nk Channel Final 21 09 2023