ಉಡುಪಿ: ರಾಜ್ಯ ಸರಕಾರ ಕೆಎಸ್ ಆರ್ ಟಿಸಿ ಮೂಲಕ ಶಕ್ತಿ ಯೋಜನೆ ಜಾರಿ ಮಾಡಿದೆ. ಇದೊಂದು ಒಳ್ಳೆಯ ಯೋಜನೆ. ನಾವು ಖಾಸಗಿ ಬಸ್ ನವರು ಕೂಡ ಮಹಿಳೆಯರಿಗೆ ಫ್ರೀ ಪ್ರಯಾಣ ಕೊಡುತ್ತೇವೆ. ಸರಕಾರ ನಮಗೆ ಹಣ ಕೊಡಲಿ ಎಂದು ಕೆನರಾ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕರಾವಳಿಯಲ್ಲಿ ಖಾಸಗಿ ಬಸ್ ಗಳು ಸಾಕಷ್ಟು ವರ್ಷಗಳಿಂದ ಸೇವೆ ನೀಡುತ್ತಿವೆ. ಗ್ರಾಮೀಣ ಭಾಗದಲ್ಲೂ ನಮ್ಮ ಬಸ್ ಗಳು ಓಡಾಡುತ್ತಿವೆ. ಶಕ್ತಿ ಯೋಜನೆಯ ಸೌಲಭ್ಯವನ್ನು ನಾವೂ ನೀಡುತ್ತೇವೆ. ಈ ಸಂಬಂಧ ಸರಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇವೆ. ಕೆಎಸ್ಸಾರ್ಟಿಸಿಗೆ ಯಾವ ರೀತಿ ಹಣ ನೀಡುತ್ತೀರೋ ಅದೇ ರೀತಿ ನಮಗೂ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.