ಉಡುಪಿ: ನಿದ್ರಾಸುಖವನ್ನು ತ್ಯಜಿಸಿ ವಿಷ್ಣು ಜಾಗೃತ ಆಗುವ ಉತ್ಥಾನ ದ್ವಾದಶಿ ಹಿನ್ನಲೆಯಲ್ಲಿ ಉಡುಪಿಯ ಲಕ್ಷ್ಮೀ ವೆಂಕಟೇಶ ದೇವಾಲಯದಲ್ಲಿ ವೈಭವದ ವಿಶ್ವರೂಪ ದರ್ಶನ ಗಮನ ಸೆಳೆಯಿತು.
Ad
ದೇವಸ್ಥಾನದಲ್ಲಿ ಸಾವಿರಾರು ಹಣತೆ ದೀಪಗಳನ್ನು ಬೆಳಗಿ ವಿಶ್ವ ರೂಪ ದರ್ಶನ ಆಚರಿಸಲಾಯ್ತು. ನಾಲ್ಕು ತಿಂಗಳ ಬಳಿಕ ನಿದ್ರಾಯೋಗದಿಂದ ವಿಷ್ಣು ಎಚ್ಚರಗೊಳ್ಳುತ್ತಾನೆ.
Ad
ಈ ದಿನ ಕೃಷ್ಣ ಹಾಗೂ ತುಳಸಿದೇವಿಯ ಮದುವೆ ಕೂಡ ಹೌದು. ಹೀಗಾಗಿ ಈ ವಿಶೇಷ ಪಶ್ಚಿಮ ಜಾಗರ ಪೂಜೆಯಲ್ಲಿ ನೂರಾರು ಭಕ್ತರು ದೀಪಗಳನ್ನು ಬೆಳಗಿ ವೆಂಕಟೇಶನ ದರ್ಶನ ಪಡೆದರು.
Ad
Ad