ಉಡುಪಿ: ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡು ಮನೆಗೆ ರೋಗಿಯನ್ನು ಕರೆದೊಯ್ಯಲು ಅಂಬುಲೆನ್ಸ್ ಗೂ ಹಣವಿಲ್ಲದೆ ಪರದಾಡಿದ ಘಟನೆ ನಡೆದಿದೆ. ಆಂಬುಲೆನ್ಸ್ ನ ಅಗತ್ಯಕ್ಕೆ ರೋಗಿಯ ಸಂಬಂಧಿಕರು ಕಷ್ಟಪಡುವಂತಾಗಿತ್ತು. ಈ ವಿಷಯ ತಿಳಿದು ಸ್ಪಂದಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಂಬುಲೆನ್ಸ್ ನ ವೆಚ್ಚ ಭರಿಸಿ ಸ್ಪಂದಿಸಿದರು.
Ad
ರೋಗಿ ಪೀನ (70) ಅಮಾವಾಸ್ಯೆ ಬೈಲು ಮೂಲದವರಾಗಿದ್ದು, ರೋಗಿಯು ಎದ್ದೇಳುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನನ್ನ ಮಾವ ಅವಿವಾಹಿತರಗಿದ್ದು ದಲಿತ ಸಮುದಾಯದವರಾದ ನಮ್ಮಲ್ಲಿ ಆಂಬುಲೆನ್ಸ್ ಬಾಡಿಗೆ ನೀಡಲು ಚಿಕ್ಕಾಸು ಕೂಡಾ ಇಲ್ಲ.
Ad
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ ಮೇಲೆ ದೂರದ ಊರಿಗೆ ಹೋಗಲು ಉಚಿತ ಆಂಬುಲೆನ್ಸ್ ಸೌಲಭ್ಯ ಇಲ್ಲದ ಕಾರಣ ಸಹಾಯ ಮಾಡಿ ಎಂದು ಸಂಬಂಧಿಕರು ವಿನಂತಿಸಿದ್ದಾರೆ. ಸ್ಪಂದಿಸಿದ ವಿಶು ಶೆಟ್ಟಿ ಕುಂದಾಪುರದ ಅಮಾವಾಸ್ಯೆಬೈಲಿಗೆ ರೋಗಿಯನ್ನು ಖಾಸಗಿ ಆಂಬುಲೆನ್ಸ್ ಮೂಲಕ ಕಳುಹಿಸಿ ಕೊಟ್ಟು ಸಹಕರಿಸಿದ್ದಾರೆ.
Ad
Ad