ಉಡುಪಿ: ಹೆಬ್ರಿ ತಾಲೂಕಿನ ಕೂಡ್ಲು ಮನೆಯಲ್ಲಿ ವಿಕ್ರಂ ಗೌಡ ಅಂತ್ಯಸಂಸ್ಕಾರ ನಡೆಯಲಿದೆ. ಹೆಬ್ರಿ ತಾಲೂಕಿನ ಕೂಡ್ಲು ವಿಕ್ರಂ ಗೌಡ ಮೂಲಮನೆಯಾಗಿದ್ದು ಸದ್ಯ ಮೂಲ ಮನೆಯಲ್ಲಿ ಯಾರು ವಾಸವಿಲ್ಲ. ಮನೆಯನ್ನು ಕೆಡವಿ ಹೊಸಮನೆ ನಿರ್ಮಾಣವಾಗುತ್ತಿದೆ. ಮನೆ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.
Ad
ಕೂಡ್ಲು ಪರಿಸರದಲ್ಲಿ ವಿಕ್ರಂ ಗೌಡ ಸೇರಿದ ಒಂದು ಎಕರೆ ಭೂಮಿ ಇದೆ. ಸ್ವಂತ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ತೀರ್ಮಾನ ಮಾಡಲಾಗಿದೆ. ಅಣ್ಣ ಸುರೇಶ ಗೌಡ ಹಾಗೂ ತಂಗಿ ಸುಗುಣ ಈ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಅಣ್ಣನಿಗೆ ಸೇರಿದ ಭೂಮಿ ಇದೆ. ಆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Ad
Ad