Bengaluru 21°C
Ad

ಉತ್ತರಾಖಂಡ ದುರಂತ: ಮೃತ ಪದ್ಮನಾಭ ಭಟ್ಟರ ಕುಂಭಾಶಿಯ ಮೂಲ ಮನೆಯಲ್ಲಿ ಸೂತಕದ ಛಾಯೆ

ಸರ್ಕಾರಿ ಕಚೇರಿ ಆವರಣದಲ್ಲಿದ್ದ ಶ್ರೀಗಂಧದ ಮರವನ್ನ ಕಳ್ಳರು ಕತ್ತರಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಿಲ್ಲಾಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗ ನಡೆದಿದೆ.

ಉಡುಪಿ: ಉತ್ತರಾಖಂಡ ರಾಜ್ಯಕ್ಕೆ ಟ್ರಕ್ಕಿಂಗ್ ಗೆ ಹೋಗಿ ದುರ್ಮರಣಕ್ಕೀಡಾದ 9 ಜನರ ಪೈಕಿ ಓರ್ವರಾದ ಪದ್ಮನಾಭ ಭಟ್ ಮೂಲತಃ ಕುಂದಾಪುರ ತಾಲೂಕು ಕುಂಭಾಶಿಯವರು ಎಂದು ತಿಳಿದು ಬಂದಿದೆ.

ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪ್ರಸ್ತುತ ಇಲ್ಲಿ ಚಿಕ್ಕಪ್ಪನ ಕುಟುಂಬದವರು ವಾಸ್ತವಿಸಿದ್ದಾರೆ. ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ವಿವಾಹಿತರಾಗಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿರುವ ಪದ್ಮನಾಭರಿಗೆ ಪ್ರವಾಸ, ಟ್ರಕ್ಕಿಂಗ್ ಇತ್ಯಾದಿಗಳಲ್ಲಿ ಆಸಕ್ತಿ ಜಾಸ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ದೂರದ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ.

ಹಾಗೆಯೇ, ಮೇ 29 ರಂದು 22 ಜನರ ತಂಡದೊಂದಿಗೆ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಎಂದು ಕರೆಯಲಾಗುವ ಬೆಟ್ಟ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಪ್ರವಾಸ ಮುಗಿಸಿ ಹುಲ್ಲುಗಾವಲಿನಂತ ಬೆಟ್ಟ ಪ್ರದೇಶದಿಂದ ಜೂನ್ 4 ರಂದು ಎಲ್ಲರೂ ಕೆಳಗಿಳಿಯುತ್ತಿದ್ದರು. 22 ಜನರ ತಂಡದಲ್ಲಿ ಒಂದಷ್ಟು ಜನ ಚಿಕ್ಕ ತಂಡವಾಗಿ ಕೆಳಗೆ ಇಳಿಯುತ್ತಿದ್ದರು. ಪದ್ಮನಾಭ ಸೇರಿದಂತೆ ಒಂಭತ್ತು ಜನರ ತಂಡ ಸುಮಾರು 15 ಸಾವಿರ ಅಡಿ ಎತ್ತರದಿಂದ ಕೆಳಗೆ ಇಳಿಯುತ್ತಿರುವಾಗ ಈ ದುರ್ಘಟನೆ ನಡೆದಿದೆ.

Ad
Ad
Nk Channel Final 21 09 2023
Ad