Bengaluru 27°C

ಅಕಾಲಿಕ ಮಳೆಗೆ ಕಲ್ಲಂಗಡಿ ಬೆಳೆ ನಾಶ, ತಲೆ ಮೇಲೆ ಕೈ ಹೊತ್ತು ಕುಳಿತ ರೈತ!

ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಹಲವು ಕೃಷಿಕರು ಸಂಕಷ್ಟ ಅನುಭವಿಸಿದ್ದಾರೆ. ಅಕಾಲಿಕ ಮಳೆಗೆ ಕೋಟ ಗಿಳಿಯಾರು ಗ್ರಾಮದ ಹರ್ತಟ್ಟು ನಲ್ಲಿ ಕಲ್ಲಂಗಡಿ ಕೃಷಿ ನಾಶವಾಗಿದೆ.

ಉಡುಪಿ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಹಲವು ಕೃಷಿಕರು ಸಂಕಷ್ಟ ಅನುಭವಿಸಿದ್ದಾರೆ. ಅಕಾಲಿಕ ಮಳೆಗೆ ಕೋಟ ಗಿಳಿಯಾರು ಗ್ರಾಮದ ಹರ್ತಟ್ಟು ನಲ್ಲಿ ಕಲ್ಲಂಗಡಿ ಕೃಷಿ ನಾಶವಾಗಿದೆ.


ಶ್ರೀಧರ ಗಾಣಿಗ ಅವರು ಬೆಳೆಸಿದ್ದ ಕಲ್ಲಂಗಡಿ ಕೃಷಿ ಮಳೆಗೆ ಆಹುತಿಯಾಗಿದೆ. ಸುಮಾರು ಮೂರು ಎಕರೆ ಜಾಗದಲ್ಲಿ ಎರಡು ತಿಂಗಳುಗಳ ಕಾಲ ಶ್ರಮವಹಿಸಿ ಶ್ರೀಧರ ದೇವಾಡಿಗ ಕಲ್ಲಂಗಡಿ ಬೆಳೆಸಿದ್ದರು.


ಆದರೆ ಅಕಾಲಿಕ ಮಳೆಗೆ ಕಲ್ಲಂಗಡಿ ಬೆಳೆ ನಾಶವಾಗಿದೆ. ಇದರ ಪರಿಣಾಮ ಶ್ರೀಧರ್ ಅವರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.


Nk Channel Final 21 09 2023