ಉಡುಪಿ: ನೋಡ ನೋಡುತ್ತಲೇ ಕಡಲಬ್ಬರದ ನಡುವೆ ಪ್ರವಾಸಿಗನೋರ್ವ ಕೊಚ್ಚಿ ಹೋದ ಘಟನೆ ಉಡುಪಿಯ ಹೂಡೆ ಬಳಿಯ ಕಡಲ ತೀರದಲ್ಲಿ ನಡೆದಿದೆ. ಉಡುಪಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗ ಮೋಜು ಮಸ್ತಿ ಗಾಗಿ ಹೂಡೆ ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದಾಗ ಕೊಚ್ಚಿಹೋಗಿದ್ದಾನೆ.
ಕಡಲಿನ ಅಬ್ಬರದ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ತೇಲಿ ಸಮುದ್ರದಲ್ಲಿ ಮುಳುಗಿ ಏಳುತ್ತಿದ್ದ. ಅದೃಷ್ಟವಶಾತ್ ಪ್ರವಾಸಿಗನ ರಕ್ಷಣೆಗೆ ಧಾವಿಸಿದ
ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ.ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಇಳಿದು ಅಲೆಗಳೊಡನೆ ಸೆಣಸಿ ಪ್ರವಾಸಿಗನ ರಕ್ಷಣೆ