ಉಡುಪಿ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.
ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ಪ್ರಾಕೃತಿಕ ವಿಕೋಪಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ತಡೆ, ಧರ್ಮ ಜಾಗೃತಿ, ಪರಿಸರ ಸಂರಕ್ಷಣೆಗೆ ಸಹಸ್ರನಾಮ ಪಠಣ ಪೂರಕವಾಗಿದೆ. ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು.
ಸಮುದ್ರ ತಟದಲ್ಲಿ ಕೇಶವ ಶಿಶುಮಂದಿರದ ಅಧ್ಯಕ್ಷ ಕೃಷ್ಣ ಹಂದೆ ಅವರು, ಅರಸಿನ ಕುಂಕುಮ ಹಾಗೂ ಹಾಲು ಎರೆದು ಮಂತ್ರ ಪಠಿಸಿ ಸಮುದ್ರ ಪೂಜೆ ನೆರವೇರಿಸಿದರು. ಒಟ್ಟು ಆರು ಬಾರಿ ವಿಷ್ಣು ಸಹಸ್ರನಾಮವನ್ನು ಇನ್ನೂರಕ್ಕೂ ಅಧಿಕ ಮಂದಿ ಸಮುದ್ರತಟ್ಟದಲ್ಲಿ ಕುಳಿತು ಪಠಿಸಿದರು.
ಈ ಸಂದರ್ಭದಲ್ಲಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ.ಮಯ್ಯ, ಮಾರ್ಗದರ್ಶಕರಾದ ವಿಷ್ಣುಮೂರ್ತಿ ಮಯ್ಯ, ಕೋಟ ಪಂಚಾಯತ್ ಸದಸ್ಯರಾದ ಪ್ರದೀಪ್ ಸಾಲಿಯಾನ್, ಶೇಖರ್ ಗಿಳಿಯಾರು, ಕೇಶವ ಶಿಶುಮಂದಿದ ಮಾತಾಜಿ ಗಿರೀಜಾ ಪೂಜಾರಿ,ಸಾಮಾಜಿಕ ಕಾರ್ಯಕರ್ತ ದಿನೇಶ್ ಗಪಂಚವರ್ಣಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಭಜನಾ ಮಂಡಳಿಯ ಸಂಚಾಲಕಿ ಗೀತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಕಾಧ್ಯಕ್ಷೆ ಪುಷ್ಭಾ ಹಂದಟ್ಟು, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ನಿರೂಪಿಸಿದರು. ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ಕೋಡಿ ತಲೆ ,ಕೋಡಿ ಕನ್ಯಾಣ,ಪಾರಂಪಳ್ಳಿ ಪಡುಕರೆ,ಕೋಟತಟ್ಟು ಪಡುಕರೆ,ಮಣೂರು ಪಡುಕರೆ,ಮಣೂರು ಜಟ್ಟಿಗೇಶ್ಚರ, ಕೊಮೆ ,ಕೊರವಡಿ ಹೀಗೆ ಜಿಲ್ಲೆಯ ವಿವಿಧ ಸಮುದ್ರ ತಟದಲ್ಲಿ ವಿವಿಧ ಸಂಘಟನೆಗಳು ಸಂಜೆ 4ರಿಂದ 6ಗ ವರೆಗೆ ವಿಷ್ಣು ಸಹಸ್ರನಾಮ ಪಠಣ ಹಮ್ಮಿಕೊಂಡಿತು.250ಕ್ಕೂ ಅಧಿಕ ಮಂದಿ ಭಾಗಿಯಾದರು.