ಉಡುಪಿ: ಸಿದ್ದರಾಮಯ್ಯ ಅವರಿಂದ ಮುಸಲ್ಮಾನರ ತುಷ್ಟಿಕರಣ ಇದೇ ಮೊದಲೇನಲ್ಲ. ಅವರಿಗೆ ಮುಸಲ್ಮಾನರ ಋಣ ತೀರಿಸಬೇಕು ಅನಿಸುತ್ತೆ. ಪರಿಶಿಷ್ಟ ಜಾತಿ- ಪಂಗಡ ಮತ್ತು ಒಬಿಸಿ ವರ್ಗಕ್ಕೆ ಈ ಸರ್ಕಾರದಿಂದ ನ್ಯಾಯ ಸಿಗಲ್ಲ. ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದರು. ಈ ಬಾರಿ ವಕ್ಫ್ ಆಸ್ತಿಗೆ ಬೇಲಿ ಹಾಕಲು ಹೊರಟಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Ad
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಮುಂದುವರೆದು ಸರಕಾರಿ ಕಾಮಗಾರಿಯಲ್ಲೂ ಮುಸಲ್ಮಾನರಿಗೆ ಮೀಸಲಾತಿ ನೀಡಲು ಹೊರಟಿದ್ದಾರೆ. ಈ ಸರಕಾರ ಸರ್ವರ ಸರ್ಕಾರ ಅಲ್ಲ, ಇದೊಂದು ಮುಸ್ಲಿಂ ಸರಕಾರ ಎಂದು ಟೀಕಿಸಿದರು.
Ad
Ad