Ad

ಚಲಿಸುತ್ತಿದ್ದ‌ ಟ್ರಕ್ ನ ಚಕ್ರದಡಿಗೆ ಸಿಲುಕಿದ ಸ್ಕೂಟರ್: ತಾಯಿ-ಮಗಳು ಪಾರು

Udupi (3)

ಉಡುಪಿ: ಚಲಿಸುತ್ತಿದ್ದ‌ ಟ್ರಕ್ ನ ಚಕ್ರದಡಿಗೆ ಸ್ಕೂಟರ್ ವೊಂದು ಸಿಲುಕಿದ ಘಟನೆ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ ಜಂಕ್ಷನ್ ಬಳಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ತಾಯಿ ಮತ್ತು ಮಗಳು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ad
300x250 2

ಗಾಯಗೊಂಡವರನ್ನು ರೋಸಿ ಮತ್ತು ಆಕೆಯ ಮಗಳು ರೆನಿಸ್ ಎಂದು ಗುರುತಿಸಲಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಹರಿಯಾಣದಿಂದ ಕೊಝಿಕೋಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad