ಉಡುಪಿ: ರಾಜ್ಯದ ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ ಕೌಂಟರ್ ಪ್ರಕರಣವನ್ನು ನಕಲಿ ಎನ್ ಕೌಂಟರ್, ಇದೊಂದು ಪೂರ್ವನಿಯೋಜಿತ ಹತ್ಯೆ ಎಂದು ಎಡಪಂಥೀಯ ಸಂಘಟನೆಗಳು, ನಕ್ಸಲ್ ಹಿತೈಷಿಗಳು ಆರೋಪಿಸಿವೆ. ಈ ಆರೋಪಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
Ad
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿನ ಒಳಗೆ ಬಂದೂಕು ಇಟ್ಟುಕೊಂಡು ಕೆಲಸ ಮಾಡುವವರು ನಕ್ಸಲರು. ಪ್ರತ್ಯಕ್ಷ ಪರೋಕ್ಷ ಸಹಕಾರ ಕೊಡುವವರು ನಗರ ನಕ್ಸಲರು. ನಗರ ನಕ್ಸಲರು ಇದು ನಕಲಿ ಎನ್ ಕೌಂಟರ್, ತಪ್ಪು ಎನ್ನಬಹುದು. ಪರವಾಗಿಲ್ಲ, ಎ ಎನ್ ಎಫ್ ಕಾರ್ಯವನ್ನು ನಾವು ಅಭಿನಂದಿಸುತ್ತೇವೆ ಎಂದರು.
Ad
ಬಂದೂಕು ಹಿಡಿದುಕೊಂಡು ಕಾಡಿನ ಜನರನ್ನು ಬೆದರಿಸುವುದಕ್ಕೆ ಬಿಡಬಾರದು. ಗುಂಡಿಗೆ ಗುಂಡಿನ ಮುಖಾಂತರವೇ ಉತ್ತರ ಕೊಡಬೇಕು. ಶರಣಾಗತಿ ಮನವಿಗಳಿಗೆ ಪೊಲೀಸ್ ಇಲಾಖೆ ಆಸ್ಪದ ನೀಡಬಾರದು. ನಗರ ನಕ್ಸಲರ ಮಾತನ್ನು ಬೆಂಬಲಿಸಬಾರದು. ಸರಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ಹಾಕಬೇಕು ಎಂದು ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
Ad
Ad