Bengaluru 22°C
Ad

ಹೆಬ್ರಿ: ತೋಡಿಗೆ ಬಿದ್ದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್

ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲ್ ವಿಕ್ರಂ ಗೌಡ ಶವ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಇಂದು ಹೆಬ್ರಿ ಕೂಡ್ಲು ರಸ್ತೆಯಲ್ಲಿ ಮಧ್ಯಾಹ್ನ ವೇಳೆ ನಡೆದಿದೆ.

ಉಡುಪಿ: ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲ್ ವಿಕ್ರಂ ಗೌಡ ಶವ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಇಂದು ಹೆಬ್ರಿ ಕೂಡ್ಲು ರಸ್ತೆಯಲ್ಲಿ ಮಧ್ಯಾಹ್ನ ವೇಳೆ ನಡೆದಿದೆ.

Ad

ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರು ಶವವನ್ನು ಕೊಂಡೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ ಬೆಳಗ್ಗೆ ವಿಕ್ರಂ ಗೌಡ ಮೃತದೇಹವನ್ನು ತಮ್ಮ ಸುರೇಶ್ ಗೌಡ ಹಾಗೂ ತಂಗಿ ಸುಗುಣ ಅವರಿಗೆ ಹಸ್ತಾಂತರಿಸಲಾಯಿತು.

Ad

ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಅವರ ಹುಟ್ಟೂರು ಹೆಬ್ರಿ ಸಮೀಪದ ಕೂಡ್ಲುಗೆ ಕೊಂಡೊಯ್ಯಲಾಯಿತು. ಅಂಬ್ಯುಲೆನ್ಸ್‌ನಲ್ಲಿ ಸುರೇಶ್ ಗೌಡ ಕೂಡ ಇದ್ದರು. ದಾರಿ ಮಧ್ಯೆ ದನವೊಂದು ಅಂಬ್ಯುಲೆನ್ಸ್‌ಗೆ ಅಡ್ಡ ಬಂದಿದ್ದು, ಇದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ರಸ್ತೆಯ ಬದಿ ಚರಂಡಿಯತ್ತ ಸಾಗಿತು.

Ad

ಇದರಿಂದ ಯಾವುದೇ ಅಪಘಾತ ಆಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಅಂಬ್ಯುಲೆನ್ಸನ್ನು ಮೇಲಕ್ಕೆ ದೂಡಿ ರಸ್ತೆಗೆ ತಂದರು. ಬಳಿಕ ಆಂಬ್ಯುಲೆನ್ಸ್ ಮನೆಯತ್ತ ಸಾಗಿತು.

Ad
Ad
Ad
Nk Channel Final 21 09 2023