Bengaluru 21°C
Ad

ಡಯಾನಾ -ಅಲೆವೂರು ಮುಖ್ಯ ರಸ್ತೆಯ ದುರಸ್ತಿಗೆ ಆಗ್ರಹಿಸಿ ವಿಚಿತ್ರ ಪ್ರತಿಭಟನೆ

ಡಯಾನಾ -ಅಲೆವೂರು ಮುಖ್ಯ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿದೆ. ಕುಕ್ಕಿಕಟ್ಟೆಯಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಆಗದಷ್ಟು ದುಸ್ಥಿತಿಗೆ ತಲುಪಿದೆ.

ಉಡುಪಿ: ಡಯಾನಾ -ಅಲೆವೂರು ಮುಖ್ಯ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿದೆ. ಕುಕ್ಕಿಕಟ್ಟೆಯಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಆಗದಷ್ಟು ದುಸ್ಥಿತಿಗೆ ತಲುಪಿದೆ.

Ad

ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿ ವರ್ಷಗಳೇ ಕಳೆದು ಹೋಗಿದ್ದು, ರಸ್ತೆ ಮಾತ್ರ ದುರಸ್ತಿಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಹಿಂದೆ ಸ್ಥಳೀಯರು ರಸ್ತೆ ದುರಸ್ತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸ್ಥಳೀಯರು ವಿಭಿನ್ನ ಪ್ರತಿಭಟನೆ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.

Ad

ರ (1)

ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ರಸ್ತೆ ದುರಸ್ಥಿಗೆ ಆಗ್ರಹಿಸಿ ಸ್ಥಳೀಯರು ವಿಚಿತ್ರ ಪ್ರತಿಭಟನೆ ನಡೆಸಿದ್ದಾರೆ. ‘ಈ ರಸ್ತೆಯ ಅವಸ್ಥೆಯನ್ನ ಕಾಣದಷ್ಟು ಕುರುಡರಾದರೆ ರಾಜಕಾರಣಿಗಳು.?’ ಎಂಬ ಬರಹದ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

Ad

ಆ ಮೂಲಕ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಪಡಿಸಿದ್ದಾರೆ. ಸ್ಥಳೀಯರು ರಸ್ತೆಯಲ್ಲಿ ಬರೆದಿರುವ ಬರಹವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Ad
Ad
Ad
Nk Channel Final 21 09 2023