Bengaluru 23°C

ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣ ದರ್ಶನ

ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ತಮ್ಮ ಪರ್ಯಾಯ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಮಂತ್ರಾಲಯ ಶ್ರೀಪಾದರನ್ನು ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಪುತ್ತಿಗೆ ಮಠಸ ಯತಿದ್ವಯರು ಬರಮಾಡಿಕೊಂಡರು.

ಉಡುಪಿ: ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ತಮ್ಮ ಪರ್ಯಾಯ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಮಂತ್ರಾಲಯ ಶ್ರೀಪಾದರನ್ನು ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಪುತ್ತಿಗೆ ಮಠಸ ಯತಿದ್ವಯರು ಬರಮಾಡಿಕೊಂಡರು.


ಬಳಿಕ ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಮಂತ್ರಾಲಯ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಪರ್ಯಾಯ ಶ್ರೀಪಾದರು ಸತ್ಕರಿಸಿದರು. ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರೆಯಲಿ ಎಂದು ಹಾರೈಸಿದರು.


ನಮ್ಮ ಮಂತ್ರಾಲಯ ರಾಘವೇಂದ್ರ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎಂದು ಉಲ್ಲೇಖಿಸಿದ ಸುಬುಧೇಂದ್ರ ತೀರ್ಥ ಶ್ರೀಪಾದರು ಸುಗುಣೇಂದ್ರ ತೀರ್ಥರು ಕೂಡಾ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎಂದು ಸ್ಮರಿಸಿದರು.


ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ದಿವಾನರಾದ ನಾಗರಾಜಾಚಾರ್ಯ,ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಮತ್ತು ಮಠದ ವಿದ್ವಾಂಸರು ಅನೇಕ ಭಕ್ತರು ಉಪಸ್ಥಿತರಿದ್ದರು.


Nk Channel Final 21 09 2023