Bengaluru 16°C

ಕಾರು ಚಾಲಕರೆ ಎಚ್ಚರ, ಗ್ಲಾಸ್ ಸಂಪೂರ್ಣ ಮುಚ್ಚಿ ಮಲಗಿದ್ದ ವ್ಯಕ್ತಿ ಸಾವು!

ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಕಾರು ಚಾಲಕ ಆನಂದ (37) ಸಾವನ್ನಪ್ಪಿದವರು.

ಮಣಿಪಾಲ: ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಮೂಲದ ಕಾರು ಚಾಲಕ ಆನಂದ (37) ಸಾವನ್ನಪ್ಪಿದವರು. ಈ ನತದೃಷ್ಟ ಚಾಲಕ ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಾತ್ರಿ ವೇಳೆ ಕಾರಿನೊಳಗೆ ಮಲಗಿಕೊಂಡಿದ್ದರು. ಕಾರಿನ ಗ್ಲಾಸ್ ಅನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಮಲಗಿದ್ದ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಕಾರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.


Nk Channel Final 21 09 2023