ಉಡುಪಿ: ಅಣ್ಣನ ಉತ್ತರ ಕ್ರಿಯೆ ಸಿದ್ಧತೆ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ಸಹೋದರಿ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಂಭವಿಸಿದೆ.
Ad
ನಿಟ್ಟೆ ಗ್ರಾಮದ ಲಲಿತಾ (59) ಮೃತ ದುರ್ದೈವಿ. ಇವರು ತನ್ನ ಅಣ್ಣ ರಾಘು ಬೋಂಟ್ರ ಎಂಬವರ ಉತ್ತರ ಕ್ರಿಯೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ಧತೆ ನಡೆದಿದ್ದು ಗುರುವಾರ ರಾತ್ರಿ 9 ಗಂಟೆ ವೇಳೆಗೆ ರಾಘು ಬೋಂಟ್ರ ಅವರ ತಂಗಿ ಶಾಮಿಯಾನದ ಆಧಾರಕ್ಕೆಂದು ಅಳವಡಿಸಿದ್ದ ಕಂಬ ಸ್ಪರ್ಶಿಸಿದ್ದರು.
Ad
ಆ ಕಂಬದಲ್ಲಿ ವಿದ್ಯುತ್ ಪ್ರವಹಿಸಿದ್ದ ಪರಿಣಾಮ ಲಲಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಲಿತಾ ಅವರು ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.
Ad
Ad