ಉಡುಪಿ: ದಾಸರ ಶ್ರೇಷ್ಠ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಸಹಸ್ರ ಕಂಠಗಾಯನ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು .
ರಥಬೀಧಿಯಲ್ಲಿ ಶ್ರೀ ಪುರಂದರ ದಾಸರ ಮೂರ್ತಿ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು.ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ಸ್ವಾಮೀಜಿಯವ ನೇತೃತ್ವದಲ್ಲಿ ನಡೆದ ಸಹಸ್ರ ಕಂಠಗಾನ ಕಾರ್ಯಕ್ರಮ ದಲ್ಲಿ ಉಡುಪಿ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ 100 ಭಜನಾ ಮಂಡಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ರು ಭಾಗವಹಿಸಿದ್ದರು.
ನಾಡಿನ ಹೆಸರಾಂತ ಸಂಗೀತ ವಿದ್ವಾಂಸರು ಹಾಗೂ ಆಕಾಶವಾಣಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಪುರಂದರ ಕೃತಿ ಪರಿಚಯ, ಭರತನಾಟ್ಯ, ಕುಣಿತ ಭಜನೆಯ ಮೂಲಕ ಪುರಂದರದಾಸರ ಆರಾಧಾನ ಮಹೋತ್ಸವವನ್ನು ಉಡುಪಿಯಲ್ಲಿ ವೈಭವ, ಸಂಭ್ರಮದಿಂದ ಆಚರಿಚಲಾಯಿತು.