ಉಡುಪಿ: ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.
ಜ್ಯೂನಿಯರ್ ಎನ್ ಟಿಆರ್, ರಿಷಬ್ ಶೆಟ್ಟಿ ಅವರು ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮ್ಮನ ಆಸೆ ತೀರಿಸಲು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜ್ಯೂ.ಎನ್ ಟಿ ಆರ್ ಅವರು, ಗೆಳೆಯ ರಿಷಬ್ ಜೊತೆ ತನ್ನ ತಾಯಿಯ ತವರು ಕುಂದಾಪುರದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಪ್ರಾಕೃತಿಕ ರಮಣೀಯತೆಯನ್ನು ಕಣ್ತುಂಬಿಕೊಂಡರು. ನಿರ್ದೇಶಕ ಪ್ರಶಾಂತ್ ನೀಲ್, ನಟ ಪಮೋದ್ ಶೆಟ್ಟಿ ಸಾಥ್ ನೀಡಿದರು.
Ad